ಬೆಂಗಳೂರು : ಬಾಳೆಹಣ್ಣಿನಿಂದ ಹಲವು ಬಗೆಯ ತಿನಿಸುಗಳನ್ನು ಮಾಡಬಹುದು. ಆದಕಾರಣ ಈ ಬಾಳೆಹಣ್ಣಿನಿಂದ ಮಕ್ಕಳಿಗೆ ಇಷ್ಟವಾದ ಇಡ್ಲಿ ತಯಾರಿಸಿ ಕೊಡಿ.
ಬೇಕಾಗುವ ಸಾಮಾಗ್ರಿಗಳು : 2 ಕಪ್ ಬಾಳೆಹಣ್ಣಿನ ತಿರುಳು, 1 ಕಪ್ ಅಕ್ಕಿ ರವಾ, ½ ಕಪ್ ತೆಂಗಿನಕಾಯಿ ತುರಿ, ½ ಕಪ್ ಬೆಲ್ಲದ ಪುಡಿ, ¼ ಚಮಚ ಏಲಕ್ಕಿ ಪುಡಿ, ಉಪ್ಪು, ಸ್ವಲ್ಪ ತುಪ್ಪ/ಎಣ್ಣೆ.
ಮಾಡುವ ವಿಧಾನ : ಬಾಳಿಹಣ್ಣನ್ನು ಸಿಪ್ಪೆ ತೆಗೆದು ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ಅಕ್ಕಿ ರವಾ, ಬೆಲ್ಲದ ಪುಡಿ, ಉಪ್ಪು, ಏಲಕ್ಕಿ ಪುಡಿ, ತೆಂಗಿನ ಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 1 ಗಂಟೆಗಳ ಕಾಲ ಹಾಗೇ ಇಡಿ. ಬಳಿಕ ಇದನ್ನು ಇಡ್ಲಿ ಹದಕ್ಕೆ ಮಿಕ್ಸ್ ಮಾಡಿ ಇಡ್ಲಿ ಪಾತ್ರೆಗೆ ತುಪ್ಪ ಸವರಿ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಹಬೆಯಲ್ಲಿ 20 ನಿಮಿಷಗಳ ಕಾಲ ಬೇಯಿಸಿದರೆ ಬಾಳೆಹಣ್ಣಿನ ಇಡ್ಲಿ ರೆಡಿ.