ಬೆಂಗಳೂರು : ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಕಿಸ್ಮುರಿ ಮಾಡಿ ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು : ಹಾಗಲಕಾಯಿ 1 1/2 ಕಪ್, ಹಸಿಮೆಣಸಿನಕಾಯಿ-3, ಹುಣಸೆ ಹಣ್ಣು ಸ್ವಲ್ಪ, ತೆಂಗಿಕಾಯಿ ತುರಿ ¼ ಕಪ್, 1/2 ಚಮಚ-ಮೆಣಸಿನ ಪುಡಿ, ಚಿಟಿಕೆ ಯಷ್ಟು ಅರಿಶಿನ, 1 ಚಮಚ ಕೊತ್ತಂಬರಿಪುಡಿ, ½ ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿಸೊಪ್ಪು, ಎಣ್ಣೆ-3 ಚಮಚ, ಉಪ್ಪು.
ಮಾಡುವ ವಿಧಾನ : ಹಾಗಲಕಾಯಿಗೆ ಸ್ವಲ್ಪ ಉಪ್ಪು ಹಾಕಿ ಅರ್ಧಗಂಟೆ ಹಾಗೇ ಇಡಿ. ಆಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದಮೇಲ ಹಾಗಲಕಾಯಿಯನ್ನು ಕರಿಯಿರಿ. ಬಳಿಕ ಇನ್ನೊಂದು ಪಾತ್ರೆಯಲ್ಲಿ ಹಸಿಮೆಣಸಿನಕಾಯಿ, ಮೆಣಸಿನ ಪುಡಿ, ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಹುಣಸೇ ಹಣ್ಣಿನ ರಸ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಅದಕ್ಕೆ ಹುರಿದ ಹಾಗಲಕಾಯಿ ಹಾಕಿದರೆ ಹಾಗಲಕಾಯಿಯ ಕಿಸ್ಮುರಿ ರೆಡಿ. ಊಟದ ಜತೆ ಇದನ್ನು ಸೇವಿಸಬಹುದು.