ದೇಹಕ್ಕೆ ಗಟ್ಟಿ, ಬಾಯಿಗೆ ರುಚಿ ಈ ‘ರಾಗಿ ಚಕ್ಕುಲಿ'

ಬುಧವಾರ, 27 ಅಕ್ಟೋಬರ್ 2021 (18:05 IST)
ಸುಸ್ಥಿರ ಆರೋಗ್ಯಕ್ಕೆ ಆಹಾರ ಪದ್ದತಿ ತುಂಬಾ ಮುಖ್ಯ. ಹಾಗೇ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ರಾಗಿಗೆ ಪ್ರಧಾನ್ಯತೆ ಹೆಚ್ಚು.
ಹಿಂದೆ ತಾತಾ ಮುತ್ತಾತನ ಕಾಲದಲ್ಲಿ ತುಂಬಾ ಗಟ್ಟಿಮುಟ್ಟು ಯಾಕೆಂದರೆ ಆ ಕಾಲದ ಆಹಾರ ಅಷ್ಟು ಆರೋಗ್ಯಕರವಾಗಿತ್ತು. ಹೆಚ್ಚಾಗಿ ರಾಗಿಯ ತಿನಿಸುಗಳನ್ನೇ ತಿನ್ನುತ್ತಿದ್ದರು. ಇತ್ತೀಚೆಗೆ ರಾಗಿ ಎಂದರೆ ಮೂಗು ಮುರಿಯುವ ಯುವ ಪೀಳಿಗೆಯನ್ನು ಗಟ್ಟಿಮುಟ್ಟಾಗಿಸಲು ತಾಯಂದಿರು ಅವರಿಗೆ ರುಚಿಕರವಾದ ತಿನಿಸುಗಳನ್ನು ಅವರಿಚ್ಛೆಯಂತೆ ಮಾಡಿಕೊಡುವುದು ವಾಡಿಕೆಯಾಗಿದೆ.
ರುಚಿಕರವಾದ ಹಾಗೂ ಆರೋಗ್ಯಕರವಾದ ರಾಗಿ ಚಕ್ಕುಲಿ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
•ರಾಗಿ ಹಿಟ್ಟು- 2 ಲೋಟ
•ನವಣೆ ಹಿಟ್ಟು-1/2 ಲೋಟ
•ಹುರಿಗಡಲೆ ಪುಡಿ-1/2 ಬಟ್ಟಲು
•ಇಂಗು- ಸ್ವಲ್ಪ
•ಖಾರದ ಪುಡಿ- 2 ಚಮಚ
•ಉಪ್ಪು- ರುಚಿಗೆ ತಕ್ಕಷ್ಟು
•ಜೀರಿಗೆ- 1/2 ಚಮಚ
•ಬಿಳಿ ಎಳ್ಳು- 1 ಚಮಚ
ಮಾಡುವ ವಿಧಾನ
•ರಾಗಿ ಹಿಟ್ಟು ಹಾಗೂ ನವಣೆಹಿಟ್ಟು ಎರಡನ್ನೂ ಚೆನ್ನಾಗಿ ಬೆರಿಸಿ, ಒಂದು ಬಟ್ಟೆಯಲ್ಲಿ ಗಟ್ಟಿಯಾಗಿ ಗಂಟು ಕಟ್ಟಿಕೊಳ್ಳಿ. ಈ ಗಂಟನ್ನು ಒಂದು ಬಟ್ಟಲಿನಲ್ಲಿ ಇಟ್ಟು 15-20 ನಿಮಿಷಗಳ ಕಾಲ ಕುಕ್ಕರ್'ನ ಹಬೆಯಲ್ಲಿ ಬೇಯಿಸಿಕೊಳ್ಳಿ.
•ಬಿಸಿ ಆರಿದ ಬಳಿಕ ಗಂಟಿನಲ್ಲಿನ ಹಿಟ್ಟಿಗೆ ಉಳಿದ ಪದಾರ್ಥಗಳನ್ನು ಸೇರಿ, ಚೆನ್ನಾಗಿ ನಾದಿಕೊಂಡು ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
•ಚಕ್ಕುಲಿ ಒರಳಿನಲ್ಲಿ ಈ ಹಿಟ್ಟನ್ನು ಒತ್ತಿ, ಕಾದ ಎಣ್ಣೆಯಲ್ಲಿ ಹದವಾಗಿ ಕರಿದರೆ ಗರಿ ಗರಿಯಾದ, ರುಚಿಕರವಾಗ ಹಾಗೂ ಆರೋಗ್ಯಕವಾಹ ಚಕ್ಕುಲಿ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ