ಒಂದೆಲಗದ ಸೊಪ್ಪಿನ ಚಟ್ನಿ ಮಾಡವ ವಿಧಾನ

ಗುರುವಾರ, 19 ಜನವರಿ 2017 (09:08 IST)
ಬೆಂಗಳೂರು:  ಒಂದೆಲಗ ಅಥವಾ ಉರಗೆ ಸೊಪ್ಪು ಆರೋಗ್ಯ ತುಂಬಾ ಒಳ್ಳೆಯದು. ಆರೋಗ್ಯವೂ ಬೇಕು, ರುಚಿಯೂ ಬೇಕು ಎಂದರೆ ಒಂದೆಲಗದ ಚಟ್ನಿ ಮಾಡಬಹುದು. ಮಾಡುವ ವಿಧಾನ ತುಂಬಾ ಸಿಂಪಲ್.

ಬೇಕಾಗುವ ಸಾಮಗ್ರಿಗಳು
 

ಒಂದೆಲಗದ ಸೊಪ್ಪು
ಹಸಿಮೆಣಸಿನ ಕಾಯಿ
ಕಾಯಿ ತುರಿ
ಉಪ್ಪು
ಹುಣಸೆ ಹುಳಿ

ಮಾಡುವ ವಿಧಾನ

ಒಂದೆಲಗದ ಎಲೆಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದನ್ನು ಕಾಯಿತುರಿ, ಹಸಿಮೆಣಸಿನ ಕಾಯಿ, ಹುಣಸೆ ಹುಳಿ ಮತ್ತು ಉಪ್ಪು ಸೇರಿಸಿ ನೀರು ಹೆಚ್ಚು ಸೇರಿಸದೆ ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ ಹಾಕಿಕೊಂಡರೆ ಒಂದೆಲಗದ ಚಟ್ನಿ ರೆಡಿ. ಇದೇ ರೀತಿ ಮಜ್ಜಿಗೆ ಹಾಕಿಕೊಂಡರೆ ಒಂದೆಲಗದ ತಂಬುಳಿಯೂ ಆಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ