ಬ್ರೆಡ್ ಪಕೋಡಾ

ಭಾನುವಾರ, 25 ಡಿಸೆಂಬರ್ 2016 (08:51 IST)
ಬೆಂಗಳೂರು: ಬ್ರೆಡ್ ತಂದು ತುಂಬಾ ದಿನ ಶೇಖರಿಸಿಡಲು ಸಾಧ್ಯವಿಲ್ಲ. ಇದೇ ಸಮಯದಲ್ಲಿ ಮನೆಗೆ ಯಾರಾದರೂ ನೆಂಟರು ಬಂದರೆ ದಿಡೀರ್ ಆಗಿ ಕರಿದ ತಿಂಡಿ ಮಾಡಬೇಕೆಂದರೆ ಬ್ರೆಡ್ ಪಕೋಡಾ ಮಾಡಬಹುದು. ಮಾಡುವ ವಿಧಾನ ನೋಡಿಕೊಳ್ಳಿ.


ಬೇಕಾಗುವ ಸಾಮಗ್ರಿಗಳು

ಬ್ರೆಡ್
ಕಡಲೇ ಹಿಟ್ಟು
ಅಕ್ಕಿ ಹುಡಿ
ಇಂಗು
ಜೀರಿಗೆ
ಉಪ್ಪು
ಖಾರದ ಪುಡಿ
ಕರಿಯಲು ಎಣ್ಣೆ

ಮಾಡುವ ವಿಧಾನ

ಬ್ರೆಡ್ ನ್ನು ಬೇಕಾದ ಆಕಾರಕ್ಕೆ ಕತ್ತರಿಸಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಕಡಲೇ ಹಿಟ್ಟು, ಸ್ವಲ್ಪವೇ ಅಕ್ಕಿ ಹಿಟ್ಟು, ಇಂಗು, ಖಾರದ ಪುಡಿ, ಜೀರಿಗೆ, ನೀರು ಹಾಕಿ ಬಜ್ಜಿ ಹಿಟ್ಟಿನ ಪ್ರಮಾಣದಲ್ಲಿ ಹಿಟ್ಟು ತಯಾರಿಸಿಕೊಳ್ಳಿ. ಇದಕ್ಕೆ ಕತ್ತರಿಸಿಟ್ಟ ಬ್ರೆಡ್ ನ್ನು ಮುಳುಗಿಸಿ ಎಣ್ಣೆಯಲ್ಲಿ ಕರಿದರೆ ದಿಡೀರ್ ಬ್ರೆಡ್ ಪಕೋಡಾ ಸವಿಯಲು ಸಿದ್ಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ