ಬದನೆ ಕಾಯಿ ಸುಟ್ಟ ಮುಖ ಮಾಡಬೇಡಿ, ಅಡುಗೆ ಮಾಡಿ

ಶನಿವಾರ, 24 ಡಿಸೆಂಬರ್ 2016 (15:49 IST)
ಬೆಂಗಳೂರು: ಬದನೆಕಾಯಿ ಸುಟ್ಟ ಹಾಗೆ ಮುಖ ಮಾಡುವುದು ಎಂದು ನಮ್ಮಲ್ಲಿ ಆಡು ನುಡಿಯಿದೆ. ಆದರೆ ಸುಟ್ಟ ಬದನೆಕಾಯಿಯಲ್ಲಿ ಎಷ್ಟು ರುಚಿಯಿದೆ, ಆರೋಗ್ಯಕರ ಅಂಶವಿದೆ ಎನ್ನುವುದನ್ನು ಮಾಡಿ ತಿಳಿಯಬೇಕು. ಬದನೆಕಾಯಿಯನ್ನು ಸುಟ್ಟು ಉಪ್ಪು ಹಾಕಿ ತಿನ್ನುವುದರಿಂದ ಕಫ ಕಡಿಮೆಯಾಗುತ್ತದೆ ಎನ್ನುತ್ತಾರೆ. ಇದರ ಸುಟ್ಟ ಗೊಜ್ಜು ಮಾಡುವುದು ಹೇಗೆ ತಿಳಿದುಕೊಳ್ಳೋಣ.


ಬೇಕಾಗುವ ಸಾಮಗ್ರಿಗಳು

 ಬದನೆಕಾಯಿ
ಹಸಿಮೆಣಸು
ಮಜ್ಜಿಗೆ
ಉಪ್ಪು
ಸಾಸಿವೆ
ಕರಿಬೇವು

ಮಾಡುವ ವಿಧಾನ

ವೃತ್ತಾಕಾರದ ಬದನೆಕಾಯಿಯನ್ನು ಕೆಂಡದಲ್ಲಿ ಅಥವಾ ಗ್ಯಾಸ್ ಸ್ಟೌವ್ ಮೇಲೆ ಹಾಗೇ ಇಟ್ಟು ಸುಟ್ಟುಕೊಳ್ಳಿ. ಇದರ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ಚೆನ್ನಾಗಿ ಕಿವುಚಿಕೊಳ್ಳಿ. ಇದಕ್ಕೆ ಸ್ವಲ್ಪವೇ ಮಜ್ಜಿಗೆ, ಉಪ್ಪು ಹಾಕಿ, ಹಸಿಮೆಣಸಿನಕಾಯಿ ಕಿವುಚಿಕೊಂಡರೆ ಸಾಕು. ಈ ಮಿಶ್ರಣಕ್ಕೆ ಸಾಸಿವೆ, ಕರಿಬೇವು, ಬೆಳ್ಳುಳ್ಳಿ ಒಗ್ಗರಣೆ ಕೊಟ್ಟರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ