ಮನೆಯಲ್ಲಿಯೇ ತಯಾರಿಸಿ ಬಿರಿಯಾನಿ ಮಸಾಲಾ

ಶನಿವಾರ, 3 ಮಾರ್ಚ್ 2018 (07:15 IST)
ಬೆಂಗಳೂರು: ಬಿರಿಯಾನಿ ತಿನ್ನಬೇಕು ಅನಿಸುತ್ತದೆ. ಆದರೆ ಹೊರಗಡೆಯಿಂಧ ಮಸಾಲಾ ತೆಗದುಕೊಂಡು ಹಾಕುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಈ ಮಸಾಲಕ್ಕೆ ರಾಸಾಯನಿಕಗಳನ್ನು ಸೇರಿಸಿರಬಹುದೇ ಎಂಬ ಆತಂಕವಿರುತ್ತದೆ. ಹಾಗಾಗಿ ಬಿರಿಯಾನಿ ಮಸಾಲಾವನ್ನು ಮನೆಯಲ್ಲಿಯೇ ಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ನೋಡಿ ಟಿಪ್ಸ್.


ಬೇಕಾಗುವ ಸಾಮಾಗ್ರಿ
ದಾಲ್ಚಿನ್ನಿ-4 ಪೀಸ್
ಸೋಂಪು-2 ಟೀ ಚಮಚ
ಜೀರಿಗೆ-1 ಟೀ ಚಮ
ಪಲಾವ್ ಎಲೆ-2
ಏಲಕ್ಕಿ-5
ಲವಂಗ-5
ಜಾಯಿಪತ್ರೆ-2
ಸ್ಟಾರ್ ಅನೈಸ್-4
ಕೊತ್ತಂಬರಿ ಬೀಜ-3 ಚಮಚ
ಒಣಗಿದ ಕೆಂಪು ಮೆಣಸು-5
ಕಾಳುಮೆಣಸು


ವಿಧಾನ:
ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಈ ಎಲ್ಲಾ ಸಾಮಾಗ್ರಿಗಳನ್ನು ಹದವಾಗಿ ಹುರಿದುಕೊಳ್ಳಿ. ನಂತರ ಇದು ತಣ್ಣಗಾದ ನಂತರ ಪುಡಿ ಮಾಡಿಟ್ಟುಕೊಳ್ಳಿ. ಗಾಳಿಯಾಡದ ಡಬ್ಬದಲ್ಲಿ ಇಟ್ಟುಕೊಂಡರೆ ಬಿರಿಯಾನಿ ಮಸಾಲಾ ಸಿದ್ಧ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ