ಚಾಕೋಲೇಟ್

ಶನಿವಾರ, 15 ನವೆಂಬರ್ 2014 (16:28 IST)
ಬೇಕಾಗುವ ಸಾಮಗ್ರಿ- ಅಮುಲ್ ಮಿಲ್ಕ್ ಪೌಡರ್ 3 ಕಪ್, ಚಾಕೋಲೇಟ್ ಪುಡಿ 1 ಕಪ್, ಸಕ್ಕರೆ 2 ಕಪ್, ಬೆಣ್ಣೆ ಅರ್ಧ ಕಪ್.
 
ಮಾಡುವ ವಿಧಾನ- ಹಾಲಿನ ಪುಡಿ ಹಾಗೂ ಚಾಕೋಲೇಟ್ ಪುಡಿಯನ್ನು ಬೆರೆಸಿ ಜರಡಿ ಹಿಡಿಯಿರಿ. ದಪ್ಪದ ಕಡಾಯಿಯನ್ನು ಒಲೆಯ ಮೇಲಿಟ್ಟು ಸ್ವಲ್ಪ ನೀರು ಹಾಕಿ. ನಂತರ ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಪಾಕ ನೂಲಿನಂತಾಗುತ್ತಾ ಬಂದಾಗ ಬೆಣ್ಣೆ ಹಾಕಿ. ನಂತರ ಬೆರೆಸಿದ ಚಾಕೋಲೇಟ್ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ ಕಲಸಿ. ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಿ. ನಂತರ ತುಪ್ಪ ಸವರಿದ ತಟ್ಟೆಯಲ್ಲಿ ಹಾಕಿ. ತಣ್ಣಾಗದ ಮೇಲೆ ಚೌಕಾಕಾರದಲ್ಲಿ ಕಟ್ ಮಾಡಿ. ಈಗ ಚಾಕೋಲೇಟ್ ರೆಡಿ.

ವೆಬ್ದುನಿಯಾವನ್ನು ಓದಿ