ಸೀಗಡಿ ಮೀನು ಮಸಾಲಾ

ಅತಿಥಾ

ಗುರುವಾರ, 25 ಜನವರಿ 2018 (16:00 IST)
ಅಗತ್ಯವಿರುವ ಸಾಮಾಗ್ರಿಗಳು:
 
ಬಿಡಿಸಿ ಸ್ವಚ್ಛಗೊಳಿಸಿದ ಸೀಗಡಿ: 200 ಗ್ರಾಂ 
ಒಣಮೆಣಸು: ಸುಮಾರು ಏಳು 
ಕೊತ್ತೊಂಬರಿ ಬೀಜ-ಎರಡು ದೊಡ್ಡಚಮಚ
ಕಾಯಿತುರಿ: ಅರ್ಧ ಕಪ್
ಕಾಳುಮೆಣಸಿನ ಪುಡಿ-ಕಾಲು ಚಿಕ್ಕ ಚಮಚ
ಚೆನ್ನಾಗಿ ಹಣ್ಣಾದ ಟೊಮೇಟೊ- 2 ಹೆಚ್ಚಿದ್ದು
ಈರುಳ್ಳಿ - ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
ಶುಂಠಿ ಬೆಳ್ಳುಳ್ಳಿ ಪೇಸ್ಟ್- ಒಂದು ದೊಡ್ಡಚಮಚ
ಉಪ್ಪು
ಎಣ್ಣೆ- ಎರಡು ದೊಡ್ಡ ಚಮಚ (
ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು
ಮಾಡುವ ವಿಧಾನ:
 
- ಒಂದು ದಪ್ಪತಳದ ಅಗಲವಾದ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಮಾಡಿ. ಬಳಿಕ ಸೀಗಡಿಯನ್ನು ಹಾಕಿ ಸುಮಾರು ಐದು ನಿಮಿಷ ಹುರಿಯಿರಿ. ಕೊಂಚ ಕಂದು ಬಣ್ಣ ಬರುತ್ತಿದ್ದಂತೆ ಇಳಿಸಿ ಒಂದು ಪಾತ್ರೆಯಲ್ಲಿ ಮುಚ್ಚಿಡಿ
- ಮಿಕ್ಸಿಯ ಜಾರ್‌ನಲ್ಲಿ ಕೊತ್ತೊಂಬರಿ, ಒಣಮೆಣಸು, ಕಾಯಿತುರಿ ಮತ್ತು ಕೊಂಚ ನೀರು ಹಾಕಿ ಚೆನ್ನಾಗಿ ಅರೆಯಿರಿ. 
- ಮಿಕ್ಸಿಯ ಜಾರ್‌ನ ನೀರು ತೆಗೆದು ಮೂರು ಟೊಮಾಟೋಗಳನ್ನು ನೀರು ಹಾಕದೇ ಅರೆಯಿರಿ. ನುಣ್ಣನೆಯ ದ್ರವವಾದ ಬಳಿಕ ಪಕ್ಕಕ್ಕಿಡಿ 
- ಈಗ ಸೀಗಡಿ ಹುರಿದ ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಹಾಕಿ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ ಹಾಕಿ ಚಿಕ್ಕ ಉರಿಯಲ್ಲಿ ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ಸತತವಾಗಿ ತಿರುವುತ್ತಲೇ ಇರಬೇಕು, ಇಲ್ಲದಿದ್ದರೆ ತಳದಲ್ಲಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸುಟ್ಟು ರುಚಿ ಕಹಿಯಾಗುತ್ತದೆ.
- ಇನ್ನು ಅರೆದ ಟೊಮಾಟೋ ಹಾಕಿ ತಿರುವುದನ್ನು ಮುಂದುವರೆಸಿ. ಬಳಿಕ ಉಪ್ಪು ಹಾಕಿ *ಟೊಮೇಟೊ ಬೆಂದಿದೆ ಎನ್ನಿಸಿದಾಗ ಹುರಿದ ಸೀಗಡಿಗಳನ್ನು ಹಾಕಿ ಮಸಾಲೆಯನ್ನು ಸೇರಿಸಿ
- ನಡುನಡುವೆ ಕೊಂಚ ತಿರುವುತ್ತಾ ಸುಮಾರು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಅನ್ನದೊಂದಿಗೆ ಸೇವಿಸುವುದಾದರೆ ನಿಮಗೆ ಬೇಕಾದ ಹದಕ್ಕೆ ನೀರು ಸೇರಿಸಿ. 
- ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸ್ವಾದಿಷ್ಟಕರ ಸೀಗಡಿ ಮಸಾಲಾ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ