ಬಾಳೆ ಕಾಯಿ ಬೇಯಿಸಿ ರುಚಿ ರುಚಿ ಚಿತ್ರಾನ್ನ ಮಾಡಿ
ದೊಡ್ಡ ಬಾಳೆಕಾಯಿಯನ್ನು ಸಿಪ್ಪೆ ತೆಗೆಯದೆ ಹಾಗೇ ಬೇಯಿಸಿ. ಇದು ಬೆಂದ ನಂತರ ಸುಲಭವಾಗಿ ಸಿಪ್ಪೆ ತೆಗೆಯಬಹುದು. ಸಿಪ್ಪೆ ತೆಗೆದು ಇದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಇಟ್ಟು, ಅರಸಿನ ಉಪ್ಪು ಹಾಕಿ. ಇದಕ್ಕೆ ಪುಡಿ ಮಾಡಿದ ಬಾಳೆಕಾಯಿಯನ್ನು ಹಾಕಿ ತಿರುವಿಕೊಂಡರೆ ಬಾಳೆಕಾಯಿಯ ಚಿತ್ರಾನ್ನ ರೆಡಿ. ಖಾರ ಬೇಕೆಂದರೆ ಸ್ವಲ್ಪ ಹಸಿಮೆಣಸಿನಕಾಯಿ ಹಾಕಿಕೊಳ್ಳಬಹುದ.