ಬೆಂಗಳೂರು: ಕೊತ್ತಂಬರಿ ಸೊಪ್ಪು ಸಾರು, ಸಾಂಬಾರಿಗೆ ಹಾಕಿದರೆ ಪಕ್ಕಕ್ಕಿಟ್ಟು ಊಟ ಮಾಡುತ್ತೇವೆ. ಆದರೆ ಕೊತ್ತಂಬರಿ ಸೊಪ್ಪನ್ನು ಹಾಗೆಯೇ ತಿನ್ನಲು ಇಷ್ಟಪಡದವರು ಚಟ್ನಿ ಮಾಡಿ ತಿನ್ನಬಹುದು.
ಬೇಕಾಗುವ ಸಾಮಗ್ರಿಗಳು
ಕೊತ್ತಂಬರಿ ಸೊಪ್ಪು
ಕಾಯಿ ತುರಿ
ಹಸಿ ಮೆಣಸಿನಕಾಯಿ
ಬೆಳ್ಳುಳ್ಳಿ
ಉಪ್ಪು
ಹುಣಸೆ ಹಣ್ಣು
ಒಗ್ಗರಣೆ ಸಾಮಾನು
ಮಾಡುವ ವಿಧಾನ
ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದರ ಜತೆಗೆ, ಕಾಯಿ ತುರಿ, ಹುಣಸೆ ಹುಳಿ, ಉಪ್ಪು, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಜತೆಗೆ ನೀರು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಸಾಸಿವೆ, ಕರಿಬೇವು ಒಗ್ಗರಣೆ ಕೊಟ್ಟರೆ, ಕೊತ್ತಂಬರಿ ಸೊಪ್ಪಿನ ಚಟ್ನಿ ರೆಡಿ. ಇದನ್ನು ದೋಸೆ, ಇಡ್ಲಿ ಜತೆ ತಿನ್ನಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ