ರುಚಿ ರುಚಿ ಮಸಾಲೆ ಕಡ್ಲೆ ಮನೆಯಲ್ಲೇ ಮಾಡಿ

ಭಾನುವಾರ, 1 ಜನವರಿ 2017 (07:21 IST)
ಬೆಂಗಳೂರು: ಮಸಾಲೆ ಕಡ್ಲೆ ಪೇಟೆಯಿಂದ ತಂದು ತಿನ್ನಲು ಇಷ್ಟವಿಲ್ಲದಿದ್ದರೆ, ಮನೆಯಲ್ಲೇ ಮಾಡಿ ತಿನ್ನಬಹುದು. ಮಾಡಲು ಸುಲಭ ಹಾಗೂ ಮನೆಯಲ್ಲೇ ಮಾಡುವುದು ಆರೋಗ್ಯಕರ ಕೂಡಾ. ಮಾಡುವುದು ಹೇಗೆಂದು ನೋಡಿಕೊಳ್ಳಿ.


ಬೇಕಾಗುವ ಸಾಮಗ್ರಿಗಳು

ನೆಲಗಡಲೆ
ಕಾರ್ನ್ ಫ್ಲೋರ್
ಕಡಲೆ ಹಿಟ್ಟು
ಉಪ್ಪು
ಓಮದ ಪುಡಿ
ಖಾರದ ಪುಡಿ
ಕರಿಯಲು ಎಣ್ಣೆ

ಮಾಡುವ ವಿಧಾನ

ನೆಲಗಡಲೆಯನ್ನು ಬಾಣಲೆಯಲ್ಲಿ ಎಣ್ಣೆ ಹಾಕದೇ ಹುರಿದಿಟ್ಟುಕೊಳ್ಳಿ. ಪಾತ್ರೆಯಲ್ಲಿ ಒಂದು ಚಮಚ ಕಾರ್ನ್ ಫ್ಲೋರ್, ಕಡಲೆ ಹಿಟ್ಟು, ಓಮದ ಪುಡಿ, ಉಪ್ಪು, ಖಾರದ ಪುಡಿ ಹಾಕಿ ಹಿಟ್ಟು ತಯಾರಿಸಿಕೊಳ್ಳಿ. ಇದಕ್ಕೆ ನೆಲಗಡಲೆ ಅದ್ದಿ ಕಾದ ಎಣ್ಣೆಯಲ್ಲಿ ಹುರಿದಕೊಳ್ಳಿ. ಬಿಸಿ ಬಿಸಿ ಮಸಾಲೆ ಕಡ್ಲೆ ತಿನ್ನಲು ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ