ಬೆಂಗಳೂರು: ಆಲೂಗಡ್ಡೆ ಬಳಸಿ ಹಲ್ವಾ ಮಾಡಬಹುದು. ಇದನ್ನು ಮಾಡುವ ವಿಧಾನ ಸಿಂಪಲ್. ಹೇಗೆಂದು ನೋಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ
ಸಕ್ಕರೆ
ತುಪ್ಪ
ಏಲಕ್ಕಿ
ಗೋಡಂಬಿ
ದ್ರಾಕ್ಷಿ
ಮಾಡುವ ವಿಧಾನ
ಆಲೂಗಡ್ಡೆ ಸಿಪ್ಪೆ ತೆಗೆದು ತುರಿದುಕೊಳ್ಳಿ. ಇದನ್ನು ಹಬೆಯಲ್ಲಿ ಬೇಯಿಸಿಕೊಳ್ಳಿ. ನಂತರ ಹಾಲು ಹಾಕಿ ಬಾಣಲೆಯಲ್ಲಿ ತಿರುವುತ್ತಿರಿ. ಇದಕ್ಕೆ ಸಕ್ಕರೆ, ತುಪ್ಪ ಹಾಕಿಕೊಂಡು ಮತ್ತಷ್ಟು ತಿರುವಿ. ಹಲ್ವಾ ತಳ ಬಿಟ್ಟು ಬರುವಾಗ ಮತ್ತಷ್ಟು ತುಪ್ಪ, ಗೋಡಂಬಿ, ದ್ರಾಕ್ಷಿ ಹಾಕಿ ತಿರುವಿ. ಹಲ್ವಾದ ಪಾಕ ಗಟ್ಟಿಯಾದಾಗ ತುಪ್ಪ ಸವರಿದ ಬಟ್ಟಲಿಗೆ ಸುರಿದುಕೊಳ್ಳಿ. ಇದನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ ಅಥವಾ ಕ್ಯಾರೆಟ್ ಹಲ್ವಾದಂತೆ ಹಾಗೆಯೇ ತಿನ್ನಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ