ಧಾರವಾಡ ಪೇಡಾ

ಶುಕ್ರವಾರ, 22 ಮಾರ್ಚ್ 2019 (19:34 IST)
ಹಲವು ವೈವಿಧ್ಯಗಳ ನಾಡು ಈ ನಮ್ಮ ಕರುನಾಡು. ಕರ್ನಾಟಕದ ಒಂದೊಂದೂ ಜಿಲ್ಲೆಯು ಒಂದೊಂದು ತಿಂಡಿಗಳಿಗೆ ಪ್ರಸಿದ್ಧಿಯನ್ನು ಹೊಂದಿದೆ. ಅಂತೆಯೇ ಹಲವು ಕವಿಶ್ರೇಷ್ಠರನ್ನು ನಾಡಿಗೆ ಕೊಟ್ಟಂತಹ ಧಾರವಾಡ ಜಿಲ್ಲೆಯ ಇನ್ನೊಂದು ವೈಶಿಷ್ಟ್ಯವೆಂದರೆ ಧಾರವಾಡ ಪೇಡಾ ಎಂದು ಹೇಳಬಹುದು. ಸಾಮಾನ್ಯವಾಗಿ ಧಾರವಾಡಕ್ಕೆ ಹೋದವರೆಲ್ಲರೂ ತಪ್ಪದೇ ಪೇಡಾವನ್ನು ಸವಿಯುತ್ತಾರೆ. ಅಂತೆಯೇ ನಾವೂ ಸಹ ಮನೆಯಲ್ಲಿಯೇ ಈ ಪೇಡಾವನ್ನು ಸುಲಭವಾಗಿ ಮಾಡಿಕೊಂಡು ಸವಿಯಬಹುದು. 
    ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಹಾಲು
* ಸಕ್ಕರೆ
 
   ತಯಾರಿಸುವ ವಿಧಾನ:
   ಮೊದಲು ಹಾಲನ್ನು ಒಡೆದು ಅದನ್ನು ಪನೀರ್ ಮಾಡಬೇಕು. ನಂತರ ಒಂದು ಪಾತ್ರೆಯಲ್ಲಿ ಅದನ್ನು ಹುರಿಯಬೇಕು. ಅದು ಸ್ವಲ್ಪ ಬಣ್ಣ ಬದಲಾವಣೆ ಆಗುತ್ತಿರುವಾಗ ಅದಕ್ಕೆ 1 ಚಮಚ ಹಾಲು ಮತ್ತು 6 ಚಮಚ ಸಕ್ಕರೆಯನ್ನು ಹಾಕಿ ಅದನ್ನು ಕೈ ಆಡಿಸುತ್ತಾ ಇರಬೇಕು. ಇದನ್ನು ಸಣ್ಣ ಉರಿಯಲ್ಲಿ ಮಾಡಬೇಕು. ನಂತರ ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಹಾಲನ್ನು ಹಾಕುತ್ತಾ ಇರಬೇಕು. ಅದು 2 ನಿಮಿಶಗಳಲ್ಲಿ ಕಂದು ಬಣ್ಣಕ್ಕೆ ತಿರುಗುವಾಗ ಸ್ಟವ್ ಅನ್ನು ಆಫ್ ಮಾಡಬೇಕು. ಅದು ತಣ್ಣಗಾದ ನಂತರ ಅದನ್ನು ಮಿಕ್ಸಿ ಮಾಡಬೇಕು. ನಂತರ ಮತ್ತೊಮ್ಮೆ ಸ್ಟವ್ ಮೇಲಿಟ್ಟು ಕಂದು ಬಣ್ಣ ಆಗುವ ತನಕ ಕೈ ಆಡಿಸುತ್ತಿರಬೇಕು. ನಂತರ ಅದನ್ನು ಉಂಡೆ ಮಾಡಿ ಸಕ್ಕರೆ ಪುಡಿಯಲ್ಲಿ ಅದ್ದು ತೆಗೆದರೆ ಧಾರವಾಡ ಪೇಡಾ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ