ಹಸಿ ತರಕಾರಿಗಳ ಮಸಾಲೆ ಭಾತ್ ಮಾಡಿದ್ದೀರಾ?
ಕೇಸರಿ ಭಾತ್, ಮಸಾಲೆ ಭಾತ್ ಮಾಡಿರಬಹುದು. ಆದರೆ ಹಸಿ ತರಕಾರಿಗಳನ್ನು ಬಳಸಿ ಮಸಾಲೆ ಭಾತ್ ಮಾಡಿ ರುಚಿ ನೋಡಿದ್ದೀರಾ?
ಮಾಡೋದು ಹೇಗೆ ?: ಅಕ್ಕಿಯನ್ನು 10 ನಿಮಿಷ ನೆನೆಸಿ ನೀರು ಹೊರತೆಗೆಯಬೇಕು. ತುಪ್ಪ ಹಾಕಿ ಅಕ್ಕಿಯನ್ನು ಹುರಿದುಕೊಳ್ಳಬೇಕು. ಆ ಬಳಿಕ ನೀರು ಹಾಕಿ ಮುಚ್ಚಬೇಕು. ಅನ್ನ ಆದ ಮೇಲೆ ಅದನ್ನು ಆರಿಸಿ.
ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಒಗ್ಗರಣೆ ಮಾಡಬೇಕು. ತರಕಾರಿಯನ್ನು ಕಟ್ ಮಾಡಿದ್ದನ್ನು ಹಾಕಿ ಬೇಯಿಸಬೇಕು. ಪಲ್ಯದ ಪುಡಿ, ಉಪ್ಪು, ನಿಂಬೆರಸ ಹಾಕಿ ಆರಿದ ಅನ್ನದಲ್ಲಿ ಕಲಿಸಿದರೆ ತರಕಾರಿಗಳ ಮಸಾಲೆ ಭಾತ್ ರೆಡಿಯಾಗುತ್ತದೆ.