ಬೆಳಗಿನ ತಿಂಡಿಗೆ ಸ್ಪೆಷಲ್ ಉಬ್ಬು ರೊಟ್ಟಿ ಮಾಡಿ

ಬುಧವಾರ, 18 ಜನವರಿ 2017 (10:51 IST)
ಬೆಂಗಳೂರು:  ಬೆಳಗಿನ ತಿಂಡಿಗೆ ಏನಾದರೂ ಹೊಸತು ಮಾಡಬೇಕಲ್ಲಾ ಎಂದು ತಲೆ ಕೆಡಿಸಿಕೊಳ್ಳುವುದು ಬೇಡ. ಉಬ್ಬು ರೊಟ್ಟಿ ಮಾಡಿಕೊಡಿ. ಮಾಡುವ ವಿಧಾನ ನೋಡಿಕೊಳ್ಳಿ.

ಬೇಕಾಗುವ ವಿಧಾನ

ಬೆಳ್ತಿಗೆ ಅಕ್ಕಿ
ಕುಚ್ಚಿಲು ಅಕ್ಕಿ
ಉಪ್ಪು
ಬಾಳೆ ಎಲೆ

ಮಾಡುವ ವಿಧಾನ

ಕುಚ್ಚಿಲು ಮತ್ತು ಬೆಳ್ತಿಗೆ ಅಕ್ಕಿಯನ್ನು ಸಮ ಪ್ರಮಾಣದಲ್ಲಿ ಹದ ಬಿಸಿ ನೀರಿನಲ್ಲಿ ಹಾಕಿ ನೆನೆ ಹಾಕಿ. ಇದನ್ನು ಉಪ್ಪು ಹಾಕಿ ನುಣ್ಣಗೆ ರುಬ್ಬಿ. ನೆನೆಪಿರಲಿ. ಹಿಟ್ಟು ರೊಟ್ಟಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಇದನ್ನು ಎರಡೂ ಬದಿಗೆ ಬಾಳೆ ಎಲೆ ಹಾಕಿಕೊಂಡು ತಟ್ಟಿ ಹಾಗೆಯೇ ತವಾ ಮೇಲೆ ಬೇಯಿಸಿ. ಪೂರ್ತಿಯಾಗಿ ಬೇಯುವುದು ಬೇಡ. ಬಾಳೆ ಎಲೆ ತೆಗೆಯಲು ಸಾಧ್ಯವಾಗುವ ಹಾಗಿದ್ದರೆ ರೊಟ್ಟಿಯನ್ನು ತವಾದಿಂದ ತೆಗೆದು ಗ್ಯಾಸ್ ಒಲೆ ಅಥವಾ ಕೆಂಡದ ಮೇಲೆ ನೇರವಾಗಿ  ಸುಟ್ಟರೆ ರೊಟ್ಟಿ ಉಬ್ಬಿ ಬರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ