ಗೆಣಸಿನ ಹಪ್ಪಳ ಹೀಗೆ ಮಾಡಿ

ಮಂಗಳವಾರ, 9 ಜೂನ್ 2020 (18:30 IST)
ಹಪ್ಪಳ ಎಂದರೆ ಕೆಲವರಿಗೆ ಪಂಚಪ್ರಾಣ. ಊಟದ ಜೊತೆಗೆ ಹಪ್ಪಳ ಇರಲೇಬೇಕು. ತರಹೇವಾರಿ ಹಪ್ಪಳದಲ್ಲಿ ಗೆಣಸಿನ ಹಪ್ಪಳ ಮಾಡಿ ರುಚಿ ನೋಡಿ.

ಏನೇನ್ ಬೇಕು?
ಉಪ್ಪು
ಎಣ್ಣೆ
ಗೆಣಸು 1 ಕಿಲೋ

ಮಾಡೋದು ಹೇಗೆ?:

ಗೆಣಸನ್ನು ಹಬೆಯಲ್ಲಿ ಬೇಯಿಸಿ, ಆರಲು ಬಿಡಿ. ಸಿಪ್ಪೆ ತೆಗೆದು ಉಪ್ಪು ಬೆರೆಸಿ ಒರಳಿನಲ್ಲಿ ರುಬ್ಬಿ. ಆ ಬಳಿಕ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ನಾದಿ. ಸಣ್ಣ ಉಂಡೆಗಳನ್ನು ಮಾಡಿ ಪ್ಲಾಸ್ಟಿಕ್ ಪೇಪರ್ ಮೇಲೆ ಇಟ್ಟು ಬಿಸಿಲಿನಲ್ಲಿ ಒಣಗಿಸಿ. ಆ ಬಳಿಕ ಎಣ್ಣೆಯಲ್ಲಿ ಕರಿದು ತಿನ್ನಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ