ಮನೆಯಲ್ಲಿಯೇ ಕೊಬ್ಬರಿ ಲಾಡು ತಯಾರಿಸುವುದು ಹೇಗೆ ಗೊತ್ತಾ?

ಬುಧವಾರ, 4 ಡಿಸೆಂಬರ್ 2019 (11:24 IST)
ಬೆಂಗಳೂರು : ಕೊಬ್ಬರಿಯಿಂದ ತಯಾರಿಸಿದ ಯಾವುದೇ ತಿಂಡಿಗಳು ತುಂಬಾ ರುಚಿಕರವಾಗಿರುತ್ತದೆ. ಆದಕಾರಣ ಮಕ್ಕಳು ತುಂಬಾ ಇಷ್ಟಪಡುವಂತಹ ಕೊಬ್ಬರಿ ಲಾಡನ್ನು ಮನೆಯಲ್ಲಿಯೇ ತಯಾರಿಸಿ ಕೊಡಿ.



ಕೊಬ್ಬರಿ ಲಾಡು ತಯಾರಿಸಲು ಬೇಕಾದ ಸಾಮಾಗ್ರಿಗಳು:
ಕಾಯಿತುರಿ 2 ಕಪ್, ಕಂಡೆನ್ಸಡ್ ಮಿಲ್ಕ್ 2 ಕಪ್, ಸಕ್ಕರೆ 1 ಕಪ್, ಏಲಕ್ಕಿ ಪುಡಿ ಸ್ವಲ್ಪ, ಬಾದಾಮಿ ಸ್ವಲ್ಪ, ತುಪ್ಪ ಸ್ವಲ್ಪ

ಮಾಡುವ ವಿಧಾನ :

ಕಾಯಿತುರಿಯನ್ನು ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ನೀರಿನಾಂಶ ಹೋಗುವವರೆಗೂ ಹುರಿದುಕೊಳ್ಳಿ. ನಂತರ ಅದಕ್ಕೆ ಕಂಡೆನ್ಸಡ್ ಮಿಲ್ಕ್  ಹಾಕಿ ಬೇಯಿಸಿಕೊಳ್ಳಿ. ಬಳಿಕ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಬೇಯಿಸಿಕೊಳ್ಳಿ. ಈ ಮಿಶ್ರಣ ಗಟ್ಟಿಯಾದ ಮೇಲೆ ಕೆಳಗಿಳಿಸಿ ಸ್ವಲ್ಪ ತಣ್ಣಗಾದ ಮೇಲೆ ಕೈಗೆ ತುಪ್ಪ ಸವರಿಕೊಂಡು ಉಂಡೆ ಮಾಡಿಕೊಳ್ಳಿ. ಅದರ ಮೇಲೆ ಬಾದಾಮಿ ಇಟ್ಟು ಅಲಂಕರಿಸಿದರೆ ಕೊಬ್ಬರಿ ಲಾಡು ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ