ಉಪ್ಪು ಹುಳಿ ಖಾರ ಮಿಶ್ರಿತ ಕರಿಬೇವಿನ ಚಟ್ನಿ ಹುಡಿ ಮಾಡುವ ವಿಧಾನ
ಶುಕ್ರವಾರ, 27 ಜನವರಿ 2017 (11:38 IST)
ಬೆಂಗಳೂರು: ಕರಿಬೇವು ಮನೆಯಲ್ಲಿ ತಂದಿಟ್ಟರೆ ತುಂಬಾ ದಿನ ಉಳಿಯೋದಿಲ್ಲ. ಕೆಲವು ದಿನ ಆದ ಮೇಲೆ ಒಣಗಿ ಹಾಳಾಗುತ್ತದಲ್ಲಾ ಎಂದು ಚಿಂತೆ ಮಾಡುವುದು ಬೇಡ. ಅದನ್ನು ಚಟ್ನಿ ಹುಡಿ ಮಾಡಿ ಸದುಪಯೋಗಪಡಿಸಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು
ಒಣಗಿದ ಕರಿಬೇವು
ಕೊಬ್ಬರಿ
ಉಪ್ಪು
ಒಣಮೆಣಸು
ಹುಳಿ
ಧನಿಯಾ ಕಾಳು
ಮಾಡುವ ವಿಧಾನ
ಕೊಬ್ಬರಿ, ಧನಿಯಾ, ಕರಿಬೇವು, ಒಣಮೆಣಸನ್ನು ಎಣ್ಣೆ ಹಾಕದೇ ಹುರಿದುಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿದ ವಸ್ತುಗಳು, ಉಪ್ಪು, ಹುಳಿ ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಗಾಳಿಯಾಡದ ಭರಣಿಯಲ್ಲಿ ತುಂಬಿಟ್ಟರೆ ಎರಡು ವಾರಗಳ ಕಾಲ ಹಾಳಾಗದೇ ಇಡಬಹುದು. ದೋಸೆ, ಅನ್ನದ ಜತೆ ತಿನ್ನಲು ರುಚಿಯಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ