ಮನೆಯಲ್ಲೇ ಮಾಡಿ ಸವಿಯಿರಿ ಎಗ್ ಲೆಸ್ ಕೇಕ್

ಗುರುವಾರ, 6 ಜುಲೈ 2017 (17:46 IST)
ಕೇಕ್ ಅಂದ್ರೆ ಎಲ್ಲರಿಗೂ ಇಷ್ಟ. ಆದ್ರೆ ಬಹಳಷ್ಟು ಜನರಿಗೆ ಕೇಕ್ ನಲ್ಲಿ ಎಗ್ ಹಾಕುವುದರಿಂದ ತಿನ್ನೋದು ಸ್ವಲ್ಪಕಷ್ಟ. ಈಗ ಹೊರಗಡೆ ಎಗ್ ಲೆಸ್ ಕೇಕ್ ಎಲ್ಲೆಡೆ ಸಿಗತ್ತೆ. ಆದ್ರೆ ಮನೆಯಲ್ಲೇ ತಯಾರಿಸಿ ಸವಿಯುವುದರಲ್ಲಿರುವ ಖುಷಿನೇ ಬೇರೆ. ಹಾಗಾದ್ರೆ ಎಗ್ ಲೆಸ್ ಕೇಕ್ ನ್ನು ಮನೆಯಲ್ಲೇ ಈಸಿಯಾಗಿ ತಯಾರಿಸುವುದು ಹೇಗೆ ಇಲ್ಲಿದೆ ಮಾಹಿತಿ.   

ಬೇಕಾಗುವ ಸಾಮಗ್ರಿಗಳು:
* ಮೈದಾ - 2 ಕಪ್ 
* ಅಡುಗೆ ಸೋಡಾ - ಒಂದು ಚಿಟುಕೆ
* ಮೊಸರು 1/2 ಕಪ್ 
* ಜೇನುತುಪ್ಪ 1/4 ಕಪ್ 
* ಸಕ್ಕರೆ ಪುಡಿ 1/2 ಕಪ್ 
* ತುಪ್ಪ 1/2 ಕಪ್ 
* ಸಿಹಿಯಿಲ್ಲದ ಕೋಕಾ ಪುಡಿ 2 ಚಮಚ 
* ಕ್ಯಾಡ್ಬರಿ ಚಾಕಲೇಟ್
* ಮೊಸರು-ಸ್ವಲ್ಪ
 
ಮಾಡುವ ವಿಧಾನ: 
*. 175 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಮೈಕ್ರೋವೇವ್ ಬಿಸಿಮಾಡಬೇಕು. ಈಗ ಕೇಕ್ ಮಾಡುವ ಬಾಣಲೆಯನ್ನು ತೆಗೆದು ಒರೆಸಿ ಅದಕ್ಕೆ ತುಪ್ಪ ಸವರಿ 
 
* ಒಂದು ಪಾತ್ರೆಯಲ್ಲಿ ಮೈದಾ, ಅಡುಗೆ ಸೋಡಾ, ಜೇನು ಮತ್ತು ತುಪ್ಪ ಹಾಕಿ ಬೆರೆಸಿ 
 
* ಮತ್ತೊಂದು ಪಾತ್ರೆಯಲ್ಲಿ ಮೊಸರು, ಕೋಕಾ ಪುಡಿ, ಸಕ್ಕರೆ ಹಾಕಿ ಚೆನ್ನಾಗಿ ಕಲೆಸಿ. ಈಗಈ ಎರಡು ಪಾತ್ರೆಯ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಬೆರೆಸಿ ನಂತರ ಅದನ್ನು ಕೇಕ್ ಬಾಣಲೆಗೆ ಹಾಕಿ.
 
* ಆ ಮಿಶ್ರಣ ಸೆಟ್ ಆಗುವರೆಗೂ ಕಾಯಬೇಕು. 
* ನಂತರ ಕೇಕ್ ಅನ್ನು 6 ನಿಮಿಷ ಬೇಯಿಸಿ ತಣ್ಣಗಾಗಲು ಬಿಡಿ. ಬಳಿಕ ಫ್ರಿಜ್ ನಲ್ಲಿ ಅರ್ಧ ಗಂಟೆ ಕಾಲ ಇಡಿ. 
 
* ಬಾಣಲೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಬ್ರಾಸಿಲ್ ಬೌಲ್ ಇಟ್ಟು ಅದರಲ್ಲಿ ಕ್ಯಾಡ್ ಬರಿ ಚಾಕಲೇಟ್ ಹಾಕಿ ಕರಗಿಸಿ.  ಕರಗಿದ ಚಾಕಲೇಟ್ ಗೆ ಒಂದು ಚಮಚ ಹಾಲು ಹಾಕಿ ಬೆರೆಸಿ. ಅದನ್ನು ತಣ್ಣನೆಯ ಕೇಕ್ ಮೇಲೆ ಸುರಿಯಿರಿ. ಎಗ್ ಲೆಸ್ ಕೇಕ್ ರೆಡಿ.
 

ವೆಬ್ದುನಿಯಾವನ್ನು ಓದಿ