ಬೆಂಗಳೂರು: ಉದ್ದಿನ ಬೇಳೆ ಬೆಲೆ ಗಗನಕ್ಕೇರಿದೆ. ಹೀಗಾಗಿ ಆಗಾಗ ಇಡ್ಲಿ ಮಾಡುವುದು ಕಷ್ಟ ಎನ್ನುವವರಿಗೆ ಮೆಂತೆ ಇಡ್ಲಿ ಮಾಡುವುದು ಹೇಗೆಂದು ಹೇಳುತ್ತೇವೆ ನೋಡಿ ಮಾಡಿ.
ಬೇಕಾಗುವ ಸಾಮಗ್ರಿಗಳು
ಮೆಂತೆ
ಇಡ್ಲಿ ಅಕ್ಕಿ
ಉಪ್ಪು
ಮಾಡುವ ವಿಧಾನ
ಮೆಂತೆ ಮತ್ತು ಇಡ್ಲಿಯನ್ನು ಪ್ರತ್ಯೇಕ ನೆನೆ ಹಾಕಿ. ಉದ್ದಿನ ಬೇಳೆ ಪ್ರಮಾಣದಲ್ಲಿ ಮೆಂತೆ ಹಾಕಬೇಡಿ. ಅದು ಕಹಿಯಾಗಬಹುದು. ಸ್ವಲ್ಪವೇ ಪ್ರಮಾಣ ಸಾಕು. ಇವೆರಡನ್ನೂ ರುಬ್ಬಿಕೊಂಡು ಹುಳಿ ಬರಿಸಲು ಇಡಿ. ಒಂದು ರಾತ್ರಿಯಷ್ಟು ಸಮಯ ಇಟ್ಟರೆ ಸಾಕು. ನಂತರ ಮಾಮೂಲು ಇಡ್ಲಿಯಂತೆ ಹಬೆಯ ಪಾತ್ರೆಯಲ್ಲಿ ಹಾಕಿ ಬೇಯಿಸಿ. ಮೆಂತೆ ಇಡ್ಲಿ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ