ಬೆಳಗಿನ ತಿಂಡಿಗೆ ಅವರೆ ಕಾಳಿನ ರೊಟ್ಟಿ

ಮಂಗಳವಾರ, 17 ಜನವರಿ 2017 (09:10 IST)
ಬೆಂಗಳೂರು: ಅವರೆಕಾಳಿನ ಸೀಸನ್ ಬಂತೆಂದರೆ ಸಾಕು. ಅದರಿಂದ ಮಾಡಲು ಸಾಧ್ಯವಾಗದ ಖಾದ್ಯಗಳೇ ಇಲ್ಲವೇನೋ. ಅವರೆಕಾಳಿನ ರೊಟ್ಟಿ ಎಲ್ಲರಿಗೂ ಗೊತ್ತಿರುವ ತಿಂಡಿ. ಆದರೂ ಗೊತ್ತಿಲ್ಲದಿದ್ದರೆ ನೋಡಿ ಮಾಡಿ.

ಬೇಕಾಗುವ ಸಾಮಗ್ರಿಗಳು

ಅವರೆಕಾಳು
ಅಕ್ಕಿ ಹಿಟ್ಟು
ಹಸಿಮೆಣಸಿನ ಕಾಯಿ
ಈರುಳ್ಳಿ
ಕೊತ್ತಂಬರಿ ಸೊಪ್ಪು
ಉಪ್ಪು
ಬಾಳೆ ಎಲೆ

ಮಾಡುವ ವಿಧಾನ

ಅವರೆಕಾಳನ್ನು ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿಕೊಳ್ಳಿ. ಇದೆಲ್ಲವನ್ನೂ ಅಕ್ಕಿ ಹಿಟ್ಟಿನ ಜತೆಗೆ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಬಾಳೆ ಎಲೆಯಲ್ಲಿ ರೊಟ್ಟಿ ತಟ್ಟಿಕೊಂಡು ಕಾದ ಕಾವಲಿಯಲ್ಲಿ ರೊಟ್ಟಿ ಬೇಯಿಸಿದರೆ ಮುಗಿಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ