ರುಚಿಯಾದ ಆಲೂ ಹಾಗಲಪಾಯಿ ಪಲ್ಯ ಮಾಡಿ ಸವಿಯಿರಿ

ಮಂಗಳವಾರ, 11 ಸೆಪ್ಟಂಬರ್ 2018 (15:37 IST)
ಹಾಗಲಕಾಯಿ ಅಂದ್ರೆನೇ ಮುಖವನ್ನು ಸೊಟ್ಟ ಮಾಡುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಹಾಗಲಕಾಯಿಯು ಕಹಿ ಅಂಶವನ್ನು ಹೊಂದಿದ್ದರೂ ಬಹಳಷ್ಚು ಆರೋಗ್ಯಕರವನ್ನೂ ಹೊಂದಿದೆ. ಆದರೆ ಹಾಗಲಕಾಯಿಯಿಂದ ಮಾಡಿದ ಆಹಾರ ಪದಾರ್ಥಗಳು ಕಹಿಯಾಗಿದ್ದರೂ ರುಚಿಯಾಗಿರುತ್ತದೆ. ಹಾಗಲಕಾಯಿಯ ಜೊತೆ ಆಲೂಗಡ್ಡೆಯನ್ನು ಹಾಕಿ ಪಲ್ಯ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ.. ಒಮ್ಮೆ ಟ್ರೈ ಮಾಡಿ. ರುಚಿ ಸವಿಯಿರಿ..
ಬೇಕಾಗುವ ಸಾಮಗ್ರಿಗಳು:
 
* ಹಾಗಲಕಾಯಿ - 3 ರಿಂದ 4
* ಈರುಳ್ಳಿ 2
* ಹಸಿ ಮೆಣಸಿನಕಾಯಿ - 2 ರಿಂದ 3
* ಆಲೂಗಡ್ಡೆ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಸ್ವಲ್ಪ ಇಂಗು
* ಹುಣಸೆಹಣ್ಣು
* ಅರ್ಧ ಚಮಚ ಅರಿಶಿನ ಪುಡಿ
* ಸ್ವಲ್ಪ ಖಾರದ ಪುಡಿ
* ಅರ್ಧ ಚಮಚ ಕೊತ್ತಂಬರಿ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ
 
ಮಾಡುವ ವಿಧಾನ:
 
ಹಾಗಲಕಾಯಿಯನ್ನು ತೊಳೆದು ಕತ್ತರಿಸಿ ನಂತರ ಅದಕ್ಕೆ ಉಪ್ಪು ಹಾಗೂ ಹುಣಸೆಹಣ್ಣನ್ನು ಹಾಕಿ ಮಿಕ್ಸಿ ಮಾಡಿ 10 ನಿಮಿಷ ಹಾಗೆಯೇ ಇಡಬೇಕು. ಏಕೆಂದರೆ ಅದು ಹಾಗೆ ಮಾಡಿದರೆ ಕಹಿ ಅಂಶವನ್ನು ಬಿಡುತ್ತದೆ. ನಂತರ ಈರುಳ್ಳಿಯನ್ನು ಮತ್ತು ಹಸಿಮೆಣಸು ಮತ್ತು ಆಲೂಗಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಈಗಾಗಲೇ ಕತ್ತರಿಸಿಟ್ಟಿದ್ದ ಅಲೂಗಡ್ಡೆಯನ್ನು ಹಾಕಿ ಫ್ರೈ ಮಾಡಬೇಕು. ನಂತರ ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಇಂಗು ಮತ್ತು ಸಣ್ಣದಾಗಿ ಕತ್ತಿರಿಸಿಟ್ಟುಕೊಂಡಿದ್ದ ಈರುಳ್ಳಿಯನ್ನು ಹಾಕಿ ಅದು ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಹಸಿಮೆಣಸಿನಕಾಯಿ ಹಾಗೂ ಫ್ರೈ ಮಾಡಿದ ಆಲೂಗಡ್ಡೆ ಹಾಕಿ 2 ರಿಂದ 3 ನಿಮಿಷ ಫ್ರೈ ಮಾಡಬೇಕು. ನಂತರ ಹಾಗಲಕಾಯಿಯನ್ನು ಹಿಂಡಿ ಹಾಕಬೇಕು. ಏಕೆಂದರೆ ಹಿಂಡಿ ಹಾಕಿದರೆ ಮಾತ್ರ ಕಹಿಯ ಅಂಶವು ಕಡಿಮೆಯಾಗುವುದು. ನಂತರ ಅರಿಶಿನ ಪುಡಿ, ಖಾರದ ಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ಹಾಕಿ 3 ರಿಂದ 4 ನಿಮಿಷ ಹುರಿಯಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ನಂತರ ಸೌಟಿನಿಂದ ಆಡಿಸುತ್ತಾ ಹುರಿದು ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಲೂ ಹಾಗಲಕಾಯಿ ಪಲ್ಯವು ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ