ಬೆಂಗಳೂರು : ಕುಂಬಳಕಾಯಿ ಆರೋಗ್ಯಕ್ಕೆ ಉತ್ತಮ. ಇದರಿಂದ ಸಾಂಬಾರುಗಳನ್ನು ತಯಾರಿಸುತ್ತಾರೆ. ಜೊತೆಗೆ ಇದರಿಂದ ಇಡ್ಲಿಗಳನ್ನು ತಯಾರಿಸಿ ತಿಂದರೆ ತುಂಬಾ ವಿಶೇಷವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು : 2 ಕಪ್ ತುರಿದ ಕುಂಬಳಕಾಯಿ, 1 ಕಪ್ ರವಾ, ½ ಕಪ್ ನೀರು, 1 ಚಮಚ ಕಡಲೆಬೇಳೆ, 1 ಚಮಚ ಹೆಸರುಬೇಳೆ, 3 ಹಸಿಮೆಣಸಿನ ಕಾಯಿ, 1 ಚಮಚ ಮೆಣಸಿನ ಪುಡಿ, 1 ಚಮಚ ಜೀರಿಗೆ, ಉಪ್ಪು, 4 ಚಮಚ ಕೊತ್ತಂಬರಿ ಸೊಪ್ಪು, ¼ ಕಪ್ ತೆಂಗಿನಕಾಯಿ ತುರಿ.
ಮಾಡುವ ವಿಧಾನ : ರವಾವನ್ನು ತೊಳೆದು ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಇದಕ್ಕೆ ಕುಂಬಳಕಾಯಿ, ಕಡಲೆಬೇಳೆ, ಹೆಸರುಬೇಳೆ, ಉಪ್ಪು, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಹಸಿಮೆಣಸಿನ ಕಾಯಿ, ಜೀರಿಗೆ, ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 15 ನಿಮಿಷ ಹಾಗೇ ಇಡಿ. ಬಳಿಕ ಅದನ್ನು ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ ಇಡ್ಲಿ ತಯಾರಿಸಿದರೆ ಕುಂಬಳಕಾಯಿ ಇಡ್ಲಿ ರೆಡಿ.