ಬೆಂಗಳೂರು : ಮೆಂತ್ಯ ಲೇಹ ಆರೋಗ್ಯಕ್ಕೆ ತುಂಬಾ ಉತ್ತಮವಾದುದು. ಇದನ್ನು ಮಾಡುವುದು ಹೇಗೆಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು : ¼ ಕಪ್ ಮೆಂತ್ಯ ಕಾಳು, ½ ಕಪ್ ತುಪ್ಪ, ½ ಕಪ್ ಬೆಲ್ಲ, 1 ¼ ಕಪ್ ನೀರು.
ಮಾಡುವ ವಿಧಾನ : ರಾತ್ರಿಯಿಡಿ ಮೆಂತ್ಯ ಕಾಳನ್ನು ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಮೆಂತ್ಯಕಾಳನ್ನು ತೊಳೆದು ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ನೀರನ್ನು ಹಾಕಿ ಕುದಿಯಲು ಇಡಿ. ಅದು ಕುದಿಯುತ್ತಿದ್ದಂತೆ ತುಪ್ಪ ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ. ನೀರು ಆವಿಯಾಗಿ ತುಪ್ಪ ಮಿಶ್ರಣವನ್ನು ಬಿಡುವವರೆಗೂ ಬೇಯಿಸಿದರೆ ಮೆಂತ್ಯ ಲೇಹ ರೆಡಿ.