ಸರಳ, ಸುಲಭ, ರುಚಿಕರ ಸಾಂಬ್ರಾಣಿ ಸಲಾಡ್

ಸೋಮವಾರ, 9 ಜನವರಿ 2017 (14:07 IST)
ಬೆಂಗಳೂರು: ಸಾಂಬ್ರಾಣಿ ಶೀತಕ್ಕೆ ಒಳ್ಳೆಯ ಮದ್ದು. ಇದನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲ. ಸಲಾಡ್ ಮಾಡಿಕೊಂಡು ತಿನ್ನಬಹುದು. ಸುಲಭ ಹಸಿ ಗೊಜ್ಜು ಅಥವಾ ಸಲಾಡ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಸಾಂಬ್ರಾಣಿ ಸೊಪ್ಪು
ಹಸಿಮೆಣಸಿನಕಾಯಿ
ಈರುಳ್ಳಿ
ಟೊಮೆಟೊ
ಉಪ್ಪು
ಮೊಸರು

ಮಾಡುವ ವಿಧಾನ

ಸಾಂಬ್ರಾಣಿ ಸೊಪ್ಪನ್ನು ಚೆ್ನ್ನಾಗಿ ತೊಳೆದುಕೊಂಡು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಈರುಳ್ಳಿ, ಟೊಮೆಟೊ,  ಹಸಿಮೆಣಸಿನಕಾಯಿಯನ್ನೂ ಹೆಚ್ಚಿಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು ಹಾಕಿ ಅರ್ಧಗಂಟೆ ಬಿಡಿ. ನಂತರ ಮೊಸರು ಹಾಕಿಕೊಂಡು, ಬೇಕಾದರೆ ಒಗ್ಗರಣೆ ಹಾಕಿಕೊಂಡು ಊಟದ ಜತೆ ಸವಿಯಿರಿ. ಇದು ಸುಲಭವಾಗಿ ದಿಡೀರ್ ಮಾಡಬಹುದಾದ ಸಲಾಡ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ