ಮಳೆಗಾಲಕ್ಕೆ ಬಿಸಿ ಬಿಸಿ ಬ್ರೆಡ್ ಪಕೋಡಾ

ಶನಿವಾರ, 13 ನವೆಂಬರ್ 2021 (09:06 IST)
ಸದ್ಯದ ಸ್ಥಿತಿಯಂತೂ ಹೆಚ್ಚು ಮಳೆ ಸುರಿಯುತ್ತಿರುವ ಕಾರಣ. ಜನರು ಹೊರಗೆ ಹೋಗದಂತೆ ಮಾಡಿದೆ ಈ ಚಳಿಗೆ ಬಿಸಿ ಬಿಸಿಯಾದ ಒಂದು ವಿನೂತನವಾದ ಬಾಯಿಗೆ ರುಚಿ ಕೊಡುವಂತಹ ರೆಸಿಪಿ ಎಲ್ಲರಿಗೂ ಇಷ್ಟವಾಗುವಂತದ್ದು ತಪ್ಪದೇ ಎಲ್ಲರೂ ಟ್ರೈ ಮಾಡಿ
ಬೇಕಾಗುವ ಸಾಮಗ್ರಿಗಳು
•2 - ಬೇಯಿಸಿದ ಆಲೂಗಡ್ಡೆ
•4 slices ಬ್ರೆಡ್ ಪೀಸ್ಗಳು
ಮುಖ್ಯ ಅಡುಗೆಗೆ
•1 ಚಮಚ ಜೀರಿಗೆೆ
•1 ಚಮಚ ಕೊತ್ತಂಬರಿ ಬೀಜ
•1 ಚಮಚ ಜೀರಿಗೆ
•ಅಗತ್ಯಕ್ಕೆ ತಕ್ಕಷ್ಟು ಕೊತ್ತಂಬರಿ ಸೊಪ್ಪು
•2 ಕಪ್ ಕಡಲೆ ಹಿಟ್ಟು
•2 ಚಮಚ ಒಣ ಮಾವಿನಕಾಯಿ ಪುಡಿ
•2 ಚಮಚ ಪುಡಿ ಮಾಡಿದ ಕಾಶ್ಮೀರ ಮೆಣಸು
•ಅಗತ್ಯಕ್ಕೆ ತಕ್ಕಷ್ಟು ಹಸಿಮೆಣಸಿನಕಾಯಿ
•1/2  ಶುಂಠಿ
•ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಮೊದಲು ಒಂದು ಬಾಣಲಿಯಲ್ಲಿ ಜೀರಿಗೆ ಮತ್ತು ಕೊತ್ತಂಬರಿಯನ್ನು ಒಣ ರೂಪದಲ್ಲಿ ಹುರಿದುಕೊಳ್ಳಿ.ಸಂಪೂರ್ಣವಾಗಿ ಆರಿದ ನಂತರ ಒರಟಾಗಿ ರುಬ್ಬಿ.
ಟೇಸ್ಟಿ ಬ್ರೆಡ್ ಪಕೋಡ ರೆಸಿಪಿ
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಸೇರಿಸಿ, ಬಿಸಿ ಮಾಡಿ.ಬಿಸಿಯಾದ ಎಣ್ಣೆಗೆ ನುಣ್ಣಗೆ ಹೆಚ್ಚಿಕೊಂಡ ಶುಂಠಿ, ಹಸಿಮೆಣಸಿನ ಕಾಯಿ, ಬೇಯಿಸಿದ ಆಲೂಗಡ್ಡೆ ಸೇರಿದಂತೆ ಎಲ್ಲಾ ಮಸಾಲೆ ಸಾಮಾಗ್ರಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
ಮಿಶ್ರಣದ ಜೊತೆಗೆ ಕೆಂಪು ಮೆಣಸಿನ ಪುಡಿ, ಹುಳಿಪುಡಿ, ಧನಿಯಾ/ಕೊತ್ತಂಬರಿ ಪುಡಿ ಮತ್ತು ಜೀರಿಗೆಯನ್ನು ಸೇರಿಸಿ, ಮಿಶ್ರಗೊಳಿಸಿ. ಮಿಶ್ರಣಕ್ಕೆ ಉಪ್ಪು ಮತ್ತು ತಾಜಾ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.ಮಿಶ್ರಣವನ್ನು ಸ್ವಲ್ಪ ಸಮಯ ಆರಲು ಒಂದೆಡೆ ಇಡಿ.
ಇನ್ನೊಂದು ಪಾತ್ರೆಯಲ್ಲಿ ಕಡ್ಲೇ ಹಿಟ್ಟು, ಓಮ್ಕಾಳು, ಸ್ವಲ್ಪ ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸೇರಿಸಿ, ಮಿಶ್ರಗೊಳಿಸಿ.ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಲು ಸ್ವಲ್ಪ ನೀರನ್ನು ಸೇರಿಸಿ, ಕದಡಿ.ಸಂಪೂರ್ಣವಾಗಿ ಮಿಶ್ರಗೊಳಿಸದ ಬಳಿಕ 5-7 ನಿಮಿಷಗಳ ಕಾಲ ವಿಶ್ರಮಿಸಲು ಪಕ್ಕಕ್ಕೆ ಇಡಿ.
ಒಂದು ಬ್ರೆಡ್ ಸ್ಲೈಸ್ ಮೇಲೆ ಆಲೂಗಡ್ಡೆಯ ಮಿಶ್ರಣವನ್ನು ಚೆನ್ನಾಗಿ ಹರಡಿ.ನಂತರ ಇನ್ನೊಂದು ಬ್ರೆಡ್ ಸ್ಲೈಸ್ ಅನ್ನು ಮುಚ್ಚಿರಿ.
ಮಿಶ್ರಣವನ್ನು ತುಂಬಿಕೊಂಡ ಬ್ರೆಡ್ ಸ್ಲೈಸ್ ಅನ್ನು ಕಡ್ಲೇ ಹಿಟ್ಟಿನಲ್ಲಿ ಅದ್ದಿ. ಚೆನ್ನಾಗಿ ಕಾದಿರುವ ಎಣ್ಣೆ ಬಂಡಿಯಲ್ಲಿ ಕರಿಯಿರಿ.ಪಕೋಡಾದ ಎರಡು ಬದಿಯಲ್ಲಿ ಚೆನ್ನಾಗಿ ಹುರಿದು, ಕಂದು ಬಣ್ಣಕ್ಕೆ ತಿರುಗಿದ ನಂತರ ಎಣ್ಣೆಯಿಂದ ತೆಗೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ