ಆರೋಗ್ಯ ಪ್ರಯೋಜನಗಳನ್ನು ನೀಡುವ ಪುದೀನಾ ಸೇವನೆಯ ಬಗ್ಗೆ ತಿಳಿಯಿರಿ

ಸೋಮವಾರ, 4 ಅಕ್ಟೋಬರ್ 2021 (07:41 IST)
ಪುದೀನಾ ಎಲೆ ಶೀತದ ಸಮಯದಲ್ಲಿ ಗಂಟಲು ನೋವು ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಮಳೆಗಾಲದಲ್ಲಿ ಪುದೀನಾದಿಂದ ತಯಾರಿಸಿದ ಚಹಾ ಮಾಡಿ ಸವಿಯುವ ಮೂಲಕ ರುಚಿಯ ಜತೆಗೆ ಆರೋಗ್ಯ ಪ್ರಯೋಜನಗಳನ್ನೂ ಸಹ ಪಡೆಯಬಹುದು.

ಸಾಮಾನ್ಯವಾಗಿ ಮನೆಗಳಲ್ಲಿ ಪುದೀನ ಸಸ್ಯವನ್ನು ಬೆಳೆದಿರುತ್ತೀರಿ. ಪುದೀನಾದಿಂದ ತಯಾರಿಸುವ ಅಡುಗೆ ಪದಾರ್ಥಗಳು ಹೆಚ್ಚು ರುಚಿಕರವಾಗಿರುತ್ತದೆ. ಪುದೀನಾ ಚಟ್ನಿ, ಪುದೀನಾ ಸಾಂಬಾರ್ ಸೇರಿದಂತೆ ಪಕೋಡಾದಂತಹ ಸ್ನ್ಯಾಕ್ಸ್ಗಳನ್ನೂ ಸಹ ಮಾಡಿ ಸವಿಯುತ್ತೇವೆ. ಹೀಗಿರುವಾಗ ಪುದೀನಾ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ಪುದೀನಾ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬೆಲ್ಲಾ ಮಾಹಿತಿ ಈ ಕೆಳಗಿನಂತಿದೆ ತಿಳಿಯಿರಿ.
ಪುದೀನಾ ಹೊಟ್ಟೆ ನೋವು, ಕೆಟ್ಟ ಮನಸ್ಥಿತಿ, ಶಕ್ತಿಯ ನಷ್ಟ ಮತ್ತು ಶೀತದಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಶೀತದ ಸಮಯದಲ್ಲಿ ಗಂಟಲು ನೋವು ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಮಳೆಗಾಲದಲ್ಲಿ ಪುದೀನಾದಿಂದ ತಯಾರಿಸಿದ ಚಹಾ ಮಾಡಿ ಸವಿಯುವ ಮೂಲಕ ರುಚಿಯ ಜತೆಗೆ ಆರೋಗ್ಯ ಪ್ರಯೋಜನಗಳನ್ನೂ ಸಹ ಪಡೆಯಬಹುದು.
ದೇಹದಲ್ಲಿ ಉಂಟಾದ ಅಲರ್ಜಿಗಳನ್ನು ಗುಣಪಡಿಸಲು ಬೇಕಾದ ಉತ್ಕರ್ಷಣ ನಿರೋಧಕವನ್ನು ಪುದೀನಾ ಹೊಂದಿರುತ್ತದೆ. ಹೊಟ್ಟೆ ನೋವಿನಿಂದ ಪರಿಹಾರ ಕಂಡುಕೊಳ್ಳಲು ಜತೆಗೆ ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆ ಸೆಳೆತದ ಸಮಸ್ಯೆಯನ್ನು ನಿವಾರಿಸುತ್ತದೆ.
ಪುದೀನಾ ಎಲೆ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯಕವಾಗಿದೆ. ತಲೆನೋವನ್ನು ನಿಯಂತ್ರಿಸುತ್ತದೆ. ಜತೆಗೆ ಬಾಯಿಯ ಉಸಿರಾಟ ಮತ್ತು ಬಾಯಿಯಿಂದ ಹೊರ ಬರುವ ಕೆಟ್ಟ ವಾಸೆನೆಯಿಂದ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಿದೆ.
ಪುದೀನಾ ಎಲೆ ಸೇವನೆ ಅಸ್ತಮಾ ರೋಗಿಗಳಿಗೆ ಸಹಾಯಕವಾಗಿದೆ. ಪುದೀನಾದಲ್ಲಿರುವ ಮೆಂಥಾಲ್ ಮೂಗು ಕಟ್ಟುವುದು ಮತ್ತು ಶೀತದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಪುದೀನಾ ತೂಕ ನಷ್ಟಕ್ಕೆ ಅನುಕೂಲವಾಗಿದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಜತೆಗೆ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಜತೆಗೆ ಖಿನ್ನತೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ ಹಾಗೂ ಚರ್ಮದ ಆರೈಕೆಗೆ ಸಹಾಯಕವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ