ಆಲೂಗಡ್ಡೆ ಚಿಪ್ಸ್ ಮಾಡುವಾಗ ಕುರುಕಲು ಆಗಬೇಕಾದರೆ ಏನು ಮಾಡಬೇಕು? ಹೀಗೆ ಮಾಡಿ

ಶುಕ್ರವಾರ, 20 ಜನವರಿ 2017 (11:02 IST)
ಬೆಂಗಳೂರು: ಆಲೂಗಡ್ಡೆ ಚಿಪ್ಸ್ ಎಲ್ಲರಿಗೂ ಇಷ್ಟ. ಆದರೆ ಚಿಪ್ಸ್ ಮಾಡಲು ಹೊರಟರೆ ಅಂಗಡಿಯಲ್ಲಿ ಸಿಗುವ ಹಾಗೆ ಕುರುಕಲು ಆಗುವುದಿಲ್ಲ ಯಾಕೆ ಎನ್ನುವುದು ಕೆಲವರ ಸಮಸ್ಯೆ. ಅದಕ್ಕಾಗಿ ಕುರುಕಲು ಆಗಬೇಕಾದರೆ ಆಲೂಗಡ್ಡೆ ಚಿಪ್ಸ್ ಮಾಡುವುದು ಹೇಗೆಂದು ಹೇಳುತ್ತೇವೆ ನೋಡಿ.

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ
ನೀರು
ಉಪ್ಪು
ಎಣ್ಣೆ
ಉಪ್ಪು
ಖಾರದ ಪುಡಿ

ಮಾಡುವ ವಿಧಾನ

ಚೆನ್ನಾಗಿ ಒಣಗಿ ಆಲೂಗಡ್ಡೆ ತೆಗೆದುಕೊಳ್ಳಿ. ಇದನ್ನು ತೆಳುವಾಗಿ ಚಿಪ್ಸ್ ತುರಿಮಣೆಯಲ್ಲಿ ತೆಳುವಾಗಿ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿ. ಐದು ನಿಮಿಷ ನೀರಿನಲ್ಲಿ ನೆನೆ ಹಾಕಿ ನಂತರ ಬಟ್ಟೆಯಲ್ಲಿ ಚೆನ್ನಾಗಿ ನೀರು ಹೀರುವಂತೆ ಹರಡಿಕೊಳ್ಳಿ. ಇದರ ನೀರು ಸಂಪೂರ್ಣ ತೆಗೆದ ಮೇಲೆ ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು ಚಿಪ್ಸ್ ಕರಿದುಕೊಳ್ಳಿ. ಅದು ಮೇಲೆ ತೇಲಿಬರುವಾಗ ಎಣ್ಣೆಯಿಂದ ಹೊರ ತೆಗೆದು ಉಪ್ಪು ಖಾರ ಹಾಕಿ. ಈಗ ಕುರುಕಲು ಚಿಪ್ಸ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ