ರುಚಿಕರ ಅವಿಯಲ್ ಮಾಡುವ ವಿಧಾನ

ಮಂಗಳವಾರ, 24 ಜನವರಿ 2017 (11:56 IST)
ಬೆಂಗಳೂರು: ಕೇರಳದ ಫೇವರಿಟ್ ಡಿಶ್ ಗಳಲ್ಲಿ ಅವಿಯಲ್ ಕೂಡಾ ಒಂದು. ಓಣಂ, ವಿಷು ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಮಲೆಯಾಳಿಗಳಿಗೆ ಇರಲೇಬೇಕಾದ ಪದಾರ್ಥವಿದು. ಇದನ್ನು ಮಾಡುವುದು ಹೇಗೆಂದು ನೋಡಿಕೊಳ್ಳಿ.

 
ಬೇಕಾಗುವ ಸಾಮಗ್ರಿಗಳು


ಬಾಳೆ ಕಾಯಿ
ತೊಂಡೆಕಾಯಿ
ಅಲಸಂಡೆ
ಸುವರ್ಣ ಗಡ್ಡೆ
ಹೀರೇಕಾಯಿ
ನುಗ್ಗೆಕಾಯಿ
ಬಟಾಣಿ ಕಾಳು
ಪಡುವಲ ಕಾಯಿ
ಹಸಿಮೆಣಸು
ಕಾಯಿತುರಿ
ಅರಸಿನಪುಡಿ
ಹುಳಿ
ಮೊಸರು
ಉಪ್ಪು
ಜೀರಿಗೆ

ಮಾಡುವ ವಿಧಾನ

ಬಾಳೆ ಕಾಯಿಯನ್ನು ಉದ್ದಕೆ ಹೆಚ್ಚಿಕೊಂಡು ಸ್ವಲ್ಪ ನೀರಿನಲ್ಲಿ ಹಾಕಿಡಿ. ನಂತರ ಉಳಿದ ತರಕಾರಿಗಳನ್ನು ಹೆಚ್ಚಿಕೊಳ್ಳಿ. ಬಾಳೆಕಾಯಿ ಹಾಗೂ ಉಳಿದ ತರಕಾರಿಗಳನ್ನು ಅರಸಿನ ಪುಡಿ, ಉಪ್ಪು, ಹಸಿಮೆಣಸು ಹಾಕಿಕೊಂಡು ಬೇಯಿಸಿಕೊಳ್ಳಿ.  ಕಾಯಿತುರಿಗೆ ಜೀರಿಗೆ, ಹಸಿಮೆಣಸು ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಬೇಯಿಸಿದ ತರಕಾರಿಗೆ ಇದನ್ನು ಸೇರಿಸಿ ಕುದಿಸಿ. ಒಂದು ಕುದಿ ಬಂದ ನಂತರ ಸ್ವಲ್ಪ ಮೊಸರು ಹಾಕಿ ಉರಿ ಆರಿಸಿ. ನಂತರ ಸ್ವಲ್ಪ ಕರಿಬೇವು ಸೊಪ್ಪು ಮತ್ತು ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡರೆ ಅವಿಯಲ್ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ