ರುಚಿಯಾದ ಬಾಳೆ ಮೋತೆ ಪಲ್ಯ ಮಾಡುವುದು ಹೇಗೆ?

ಮಂಗಳವಾರ, 10 ಜನವರಿ 2017 (11:41 IST)
ಬೆಂಗಳೂರು: ಬಾಳೆ ಮೋತೆ ಅಥವಾ ಹೂವಿನಲ್ಲಿ ದೇಹದ ಆರೋಗ್ಯಕ್ಕೆ ಉತ್ತಮವಾದ ಅಂಶಗಳೆಲ್ಲವೂ ಇದೆ. ಇದರಿಂದ ಹಲವು ಖಾದ್ಯಗಳನ್ನು ಮಾಡಬಹುದು. ಅದರ ಪಲ್ಯ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿ
 

ಬಾಳೆ ಮೋತೆ
ಬೆಲ್ಲ
ಖಾರದ ಪುಡಿ
ಅರಸಿನ ಪುಡಿ
ಉಪ್ಪು
ಒಗ್ಗರಣೆ ಸಾಮಾನು

ಮಾಡುವ ವಿಧಾನಗಳು

ಬಾಳೆ ಮೋತೆಯನ್ನು ಚಿಕ್ಕದಾಗಿ ಹೆಚ್ಚಿ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆ ಹಾಕಿಡಿ. ಇದರಲ್ಲಿ ಕಹಿ ಅಂಶ ಹೋಗುವಷ್ಟು ಸಮಯ ನೆನೆ ಹಾಕಿಡಿ. ನಂತರ ನೀರಿನಿಂದ ತೆಗೆದು, ಮೆಣಸಿನ ಪುಡಿ, ಅರಸಿನ ಪುಡಿ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ. ಡ್ರೈ ಆದ ಮೇಲೆ ಉರಿ ಆರಿಸಿ. ನಂತರ ಅಕ್ಕಿ, ಸಾಸಿವೆ, ಕೆಂಪು ಮೆಣಸು, ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಈಗ ಬಾಳೆ ಮೋತೆಯ ಪಲ್ಯ ತಿನ್ನಲು ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ