ಬೆಂಗಳೂರು: ಹಲಸಿನ ಬೀಜದ ಮಿಲ್ಕ್ ಶೇಕ್ ಮಾಡುವುದರ ಬಗ್ಗೆ ಈ ಮೊದಲು ಬರೆದಿದ್ದೇವೆ. ಇದೀಗ ಹಲ್ವಾ ಮಾಡುವುದು ಹೇಗೆ ಎಂದು ಹೇಳುತ್ತೇವೆ. ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು
ಹಲಸಿನ ಬೀಜ
ಬೆಲ್ಲ
ಏಲಕ್ಕಿ
ದ್ರಾಕ್ಷಿ, ಗೋಡಂಬಿ
ತುಪ್ಪ
ಮಾಡುವ ವಿಧಾನ
ಹಲಸಿನ ಬೀಜವನ್ನು ಸಿಪ್ಪೆ ತೆಗೆದು ಚೆನ್ನಾಗಿ ಬೇಯಿಸಿಕೊಳ್ಳಿ. ಇದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಬೆಲ್ಲದ ಪಾಕ ಮಾಡಿಕೊಳ್ಳಿ. ಈಗ ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಇವೆರಡನ್ನೂ ಮಿಶ್ರಣ ಮಾಡಿಕೊಂಡು ಹದ ಉರಿಯಲ್ಲಿ ಕೈಯಾಡಿಸುತ್ತಾ ಇರಿ. ಪಾಕ ಒಂದು ಹಂತ ಬಂದ ಮೇಲೆ ಸ್ವಲ್ಪ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಹಾಕಿ. ಪಾತ್ರೆ ತಳ ಬಿಟ್ಟು ಬರುವಾಗ ಮೊದಲೇ ತುಪ್ಪ ಸವರಿಟ್ಟ ತಟ್ಟೆಗೆ ಪಾಕವನ್ನು ಸುರಿದುಕೊಳ್ಳಿ. ಈಗ ಹಲಸಿನ ಬೀಜದ ಹಲ್ವಾ ರೆಡಿ.