ಬೆಂಗಳೂರು : ಆರೋಗ್ಯಕರವಾದ ಸಬ್ಬಕ್ಕಿಯಿಂದ ರುಚಿಕರವಾದ ಉಪ್ಪಿ ಟ್ಟು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು : ಸಬ್ಬಕ್ಕಿ 1 ಕಪ್, ಆಲೂಗಡ್ಡೆ 1, ಶೇಂಗಾ ಪುಡಿ 3 ಚಮಚ, ಸಕ್ಕರೆ ½ ಚಮಚ, ಎಣ್ಣೆ 1 ಚಮಚ, ಜೀರಿಗೆ 1 ಚಮಚ, ಹಸಿಮೆಣಸು 2-3, ಅರಿಶಿನ ¼ ಚಮಚ, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ನೆನೆಸಿಟ್ಟ ಸಬ್ಬಕ್ಕಿಗೆ ಶೇಂಗಾ ಪುಡಿ, ಉಪ್ಪು, ಸಕ್ಕರೆ ಹಾಕಿ ಕಲಸಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ. ಹಸಿಮೆಣಸು, ಕರಿಬೇವು, ಅರಿಶಿನ ಪುಡಿ ಹಾಕಿ ಒಗ್ಗರಣೆ ಹಾಕಿ. ಇದಕ್ಕ ಬೇಯಿಸಿದ ಆಲೂಗಡ್ಡೆ ಹಾಕಿ ಹುರಿಯಿರಿ. ಅದಕ್ಕೆ ಸಬ್ಬಕ್ಕಿ ಹಾಕಿ 5 ನಿಮಿಷ ಬೇಯಿಸಿ. ಅದು ಬೆಂದ ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.