ಬೆಂಗಳೂರು : ಎಲ್ಲರೂ ಸುಂದರವಾಗಿ ಕಾಣಬೇಕೆಂದು ಮೇಕಪ್ ಮಾಡುತ್ತಾರೆ. ಆದರೆ ಕೆಲವರು ಮೇಕಪ್ ಮಾಡಿದರೂ ಕೂಡ ಸುಂದರವಾಗಿ ಕಾಣುವುದಿಲ್ಲ. ಅಂತವರು ಮನೆಯಲ್ಲಿಯೇ ತಯಾರಿಸಿದ ಈ ಕ್ರೀಂನ್ನು ಹಚ್ಚಿ.
ಅಲೋವೆರಾ ಜೆಲ್ 2 ಚಮಚ, ಸನ್ ಸ್ಕ್ರೀನ್ 1 ಚಮಚ, ಗ್ಲಿಸರಿನ್ 1 ಚಮಚ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿದಾಗ ಅದರಿಂದ ಒಂದು ಕ್ರೀಂ ರೆಡಿಯಾಗುತ್ತದೆ. ಅದನ್ನು ಮೇಕಪ್ ಮಾಡುವ ಮೊದಲು ಮುಖಕ್ಕೆ ಹಚ್ಚಬೇಕು.