ಬೆಂಗಳೂರು: ನಾವು ಪ್ರತಿನಿತ್ಯ ಅಡುಗೆಗೆ ಬಳಕೆ ಮಾಡುವ ಖಾರದ ಪುಡಿ ಪರಿಶುದ್ಧವಾಗಿದೆಯೇ, ಇಲ್ಲಾ ಕಲಬೆರಕೆಯಾಗಿದೆ ಯೇ ಎಂದು ತಿಳಿದುಕೊಳ್ಳಲು ಕೆಲವು ಸಿಂಪಲ್ ಟ್ರಿಕ್ ಬಳಸಿ ನೋಡಿ.
ಅಂಗಡಿಯಲ್ಲಿ ಸೀಲ್ ಆದ ಪ್ಯಾಕೆಟ್ ನಲ್ಲಿ ಸಿಗುವ ವಸ್ತುಗಳಾದರೂ ಅದು ಪರಿಶುದ್ಧವಾಗಿದೆಯೇ ಎನ್ನುವುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ. ಇಂದಿನ ದಿನಗಳಲ್ಲಿ ಲಾಭದ ದೃಷ್ಟಿಯಿಂದ ಆಹಾರ ಕಲಬೆರಕೆ ಎನ್ನುವುದು ವ್ಯಾಪಕವಾಗಿ ನಡೆಯುತ್ತಿದೆ. ಕಲಬೆರಕೆ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನಾವು ಬಳಸುವ ಆಹಾರ ಪರಿಶುದ್ಧವಾಗಿದೆಯೇ ಎಂದು ಗಮನಿಸುವುದು ಮುಖ್ಯ.
ಅದರಲ್ಲೂ ವಿಶೇಷವಾಗಿ ಕೆಲವೊಂದು ವಸ್ತುಗಳನ್ನು ತೊಳೆದು ತಿನ್ನಲೂ ಆಗುವುದಿಲ್ಲ. ಉದಾಹರಣೆಗೆ ಖಾರದ ಪುಡಿ, ಅರಿಶಿಣ ಪುಡಿ ಇತ್ಯಾದಿ. ಆದರೆ ಇವುಗಳು ಪರಿಶುದ್ಧವಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಹೇಗೆ? ಮತ್ತು ಕಲಬೆರಕೆಯಾಗಿದ್ದರೆ ಅವುಗಳನ್ನು ಕಂಡುಹಿಡಿಯುವುದು ಹೇಗೆ ಎನ್ನುವುದೇ ನಮಗೆ ತಲೆನೋವು.
ಇದಕ್ಕೆ ಒಂದು ಸಿಂಪಲ್ ಟ್ರಿಕ್ ಮಾಡಿ ನೋಡಿ. ಅಂಗಡಿಯಿಂದ ತಂದ ತಕ್ಷಣ ಖಾರದ ಪುಡಿಯನ್ನು ಒಂದು ಗ್ಲಾಸ್ ಅಥವಾ ಬೌಲ್ ನೀರು ತೆಗೆದುಕೊಂಡು ಅದಕ್ಕೆ ಖಾರದ ಪುಡಿಯನ್ನು ಹಾಕಿ ನೋಡಿ. ಕಲಬೆರಕೆಯಾಗಿದ್ದರೆ ಖಾರದ ಪುಡಿ ತೇಲುತ್ತದೆ. ಪರಿಶುದ್ಧವಾಗಿದ್ದರೆ ಖಾರದ ಪುಡಿ ಗ್ಲಾಸ್ ನ ತಳಭಾಗ ಸೇರುತ್ತದೆ. ಅಲ್ಲದೆ ನೀರಿನ ಬಣ್ಣವೂ ಬದಲಾಗುತ್ತದೆ. ಇದನ್ನು ಗಮನಿಸಿ ಕಲಬೆರಕೆಯಾಗಿದೆಯೇ ಎಂದು ತಿಳಿದುಕೊಳ್ಳಬಹುದು.