ಬೆಂಗಳೂರು: ಹಲಸಿನಕಾಯಿ ಸೀಸನ್ ಇದು. ಲಾಕ್ ಡೌನ್ ವೇಳೆ ಮನೆಯಲ್ಲೇ ಇರುವಾಗ ಏನಾದರೂ ಕುರುಕಲು ಮಾಡಿ ತಿನ್ನಬೇಕೆಂದರೆ ಹಲಸಿನ ಕಾಯಿ ಚಿಪ್ಸ್ ಹೀಗೆ ಮಾಡಿ ರುಚಿ ರುಚಿಯಾಗಿ ಸೇವಿಸಿ.
ಹಲಸಿನ ತೊಳೆಗಳನ್ನು ಬಿಡಿಸಿ ಉದ್ದಕ್ಕೆ ಹೆಚ್ಚಿಕೊಳ್ಳಿ. ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಉದ್ದವಾಗಿ ಹಚ್ಚಿದ ತೊಳೆಗಳನ್ನು ಮಧ್ಯಮ ಉರಿಯಲ್ಲಿ ಗರಿ ಗರಿಯಾಗುವ ತನಕ ಕರಿಯಬೇಕು. ಶಬ್ಧ ನಿಂತ ಮೇಲೆ ಕರಿದಾಗಿದೆ ಎಂದರ್ಥ.
ಕರಿದ ತೊಳೆಗಳನ್ನು ಒಂದು ಜ್ಯಾಲರಿ ಅಥವಾ ಟಿಶ್ಯೂ ಮೇಲೆ ಹಾಕಿ ಐದು ನಿಮಿಷ ಹರಡಿ. ಮೇಲಿನಿಂದ ರುಚಿಗೆ ತಕ್ಕಷ್ಟು ಉಪ್ಪು, ಮಸಾಲ ಪುಡಿ ಉದುರಿಸಿ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಕೊಂಡರೆ ತುಂಬಾ ಸಮಯದವರೆಗೆ ಉಳಿಯುತ್ತದೆ.