ಅಡುಗೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೊದಲು ಎಚ್ಚರವಿರಲಿ!

ಶುಕ್ರವಾರ, 1 ಮೇ 2020 (09:37 IST)
ಬೆಂಗಳೂರು: ಲಾಕ್ ಡೌನ್ ವೇಳೆ ಮನೆಯಲ್ಲೇ ಇರುವಾಗ ಬೇಸರ ಕಳೆಯಲು ಏನಾದರೊಂದು ಹೊಸ ರುಚಿ ಮಾಡುತ್ತಿರುವುದು ಸಾಮಾನ್ಯ. ಈ ವಿಚಾರದಲ್ಲಿ ಸೆಲೆಬ್ರಿಟಿಗಳೂ ಹಿಂದೆ ಬಿದ್ದಿಲ್ಲ. ಆದರೆ ಹೀಗೆ ಮಾಡಿದ ಅಡುಗೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೊದಲು ಎಚ್ಚರವಿರಲಿ.


ಈಗ ಹೇಳಿ ಕೇಳಿ ಲಾಕ್ ಡೌನ್. ಎಷ್ಟೋ ಜನ ಬಡವರು ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೇ ಹಸಿವಿನಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಮನೆಯಲ್ಲಿ ಮಾಡಿದ ಅಡುಗೆಯಲ್ಲಿ ನಮ್ಮ ಸುತ್ತ ಹಸಿದಿರುವ ಜೀವಗಳಿಗೆ ಹಂಚಿ ತಿನ್ನುವ ಉದಾರತೆ ತೋರಿಸಬೇಕೇ ಹೊರತು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಪ್ರಕಟಿಸಿ ತೋರಿಕೆ ಮಾಡುವುದಲ್ಲ. ಇದುವೇ ಒಂದು ರೀತಿಯಲ್ಲಿ ಮಾನವೀಯತೆಯೇ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ