ಅರ್ಧ ಚಮಚ ಕಾಳುಮೆಣಸಿನ ಪುಡಿ.
ತಯಾರಿಸುವ ವಿಧಾನ : ಜೀರಿಗೆಯನ್ನು ಹುರಿದು ಪುಡಿ ಮಾಡಿಕೊಳ್ಳಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಬ್ಲೆಂಡರ್ ನಲ್ಲಿ ಹಾಕಿ ರುಬ್ಬಿಕೊಳ್ಳಿ. ದೊಡ್ಡ ಜಗ್ ತೆಗೆದುಕೊಂಡು ಅದರಲ್ಲಿ ನಾಲ್ಕಾರು ಐಸ್ ಕ್ಯೂಬ್ಸ್ ಹಾಕಿ. ತುರಿದ ಶುಂಠಿಯನ್ನು ಬೆರೆಸಿ. ರುಬ್ಬಿಕೊಂಡ ಸೊಪ್ಪಿನ ಮಿಶ್ರಣವನ್ನೂ ಹಾಕಿಕೊಳ್ಳಿ. ನಂತರ ಅದಕ್ಕೆ ಜೀರಿಗೆ ಪುಡಿ, ಆಮ್ ಚೂರ್ ಪೌಡರ್, ಉಪ್ಪು, 2 ಗ್ಲಾಸ್‌ನಷ್ಟು ನೀರು, ನಿಂಬೆ ರಸ, ಕಾಳುಮೆಣಸಿನ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು, ಹುಳಿ ಸರಿಯಾಗಿದೆಯಾ ಅಂತಾ ಪರಿಶೀಲಿಸಿದರೆ ನಿಮ್ಮ ಮೆಚ್ಚಿನ ಆರೋಗ್ಯಕರ ಜಲ್ಜೀರಾ ಕುಡಿಯಲು ಸಿದ್ಧ.