ಸ್ವಾದಿಷ್ಠ ಜೋಳದ ಸಮೋಸ

ಸೋಮವಾರ, 25 ಮಾರ್ಚ್ 2019 (14:42 IST)
ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿರುವ ಆಹಾರ ಪದಾರ್ಥದಲ್ಲಿ ಜೋಳವೂ ಒಂದು. ನಾವೆಲ್ಲರೂ ಜೋಳದ ರೊಟ್ಟಿಯನ್ನು ಸವಿದಿರುತ್ತೇವೆ. ಆದರೆ ಜೋಳದ ಸಮೋಸವೂ ಕೂಡಾ ಸ್ವಾದಿಷ್ಟವಾಗಿರುತ್ತದೆ. 
 
     
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಜೋಳದ ಹಿಟ್ಟು 1 ಕಪ್
* ಮೈದಾ ಹಿಟ್ಟು 1 ಕಪ್
* ಆಲೂಗಡ್ಡೆ
* ಬೇಯಿಸಿದ ಬಟಾಣಿ
* ಈರುಳ್ಳಿ
* ಹಸಿಮೆಣಸಿನಕಾಯಿ
* ಕರಿಬೇವು ಸ್ವಲ್ಪ
 
   ತಯಾರಿಸುವ ವಿಧಾನ:
  ಮೊದಲು ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಬೆರೆಸಿ ಅದಕ್ಕೆ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ ಹಿಟ್ಟನ್ನು ಹದವಾಗಿ ನಾದಬೇಕು. ನಂತರ ಚಿಕ್ಕದಾದ ಚಪಾತಿ ಉಂಡೆಗಳಂತೆ ಮಾಡಿ ಅದನ್ನು ಲಟ್ಟಿಸಿ ಅದರ ಅರ್ಧ ಭಾಗವನ್ನು ಕತ್ತರಿಸಿಟ್ಟುಕೊಳ್ಳಬೇಕು. ನಂತರ ಅದರಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಸರಿಯಾಗಿ ಕಿವುಚಿ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು, ಬೇಯಿಸಿದ ಬಟಾಣಿ ಮತ್ತು ರುಚಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಒಗ್ಗರಣೆಯನ್ನು ಹಾಕಿಕೊಳ್ಳಿ. ನಂತರ ಈ ಮಸಾಲೆಯನ್ನು ಈಗಾಗಲೇ ಅರ್ಧ ಕತ್ತರಿಸಿಕೊಂಡ ಚಪಾತಿಯಲ್ಲಿ ತುಂಬಿ ತ್ರಿಕೋನಾಕಾರದಲ್ಲಿ ಮಾಡಿ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಜೋಳದ ಸಮೋಸ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ