ಕೇಸರಿಯ ದೂದ್ ಪೇಡಾ

ಗುರುವಾರ, 21 ಫೆಬ್ರವರಿ 2019 (14:02 IST)
ದೂದ್ ಪೇಡಾ ಅಂದರೆ ಎಲ್ಲರಿಗೂ ಬಾಯಲ್ಲಿ ನೀರೂರುತ್ತದೆ ಅಲ್ಲವೇ.. ಇದನ್ನು ಕೇಸರಿ ಹಾಕಿ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಮತ್ತು ತಿನ್ನಲೂ ರುಚಿಕರವಾಗಿರುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಒಂದೂವರೆ ಕಪ್ ಹಾಲಿನ ಪುಡಿ
* 2 ಟೀ ಚಮಚ ತುಪ್ಪ
* 1 ಟೀನ್ ಮಿಲ್ಕ್ ಮೇಡ್
* 1 ಟೀ ಚಮಚ ಏಲಕ್ಕಿ ಪುಡಿ
* ಸ್ವಲ್ಪ ಬಿಸಿ ಹಾಲು (ಕೇಸರಿ ದಳಗಳನ್ನು ನೆನೆಸಿಕೊಳ್ಳಲು)
* 1 ಟೀ ಚಮಚ ಕೇಸರಿದಳ
* ಅಲಂಕರಿಸಲು ಒಣ ಪಿಸ್ತಾ, ಗೋಡಂಬಿ, ಬಾದಾಮಿ
ತಯಾರಿಸುವ ವಿಧಾನ :
 
ಮೊದಲು ಕೇಸರಿಯನ್ನು ಹಾಲಿನಲ್ಲಿ ನೆನೆಸಿಡಬೇಕು. ನಂತರ ಒಂದು ಬಾಣಲೆಯಲ್ಲಿ 1 ಟೀ ಚಮಚ ತುಪ್ಪವನ್ನು ಹಾಕಿ ಅದಕ್ಕೆ ಮಿಲ್ಕ್ ಮೇಡ್ ಮತ್ತು ಹಾಲಿನ ಹಾಲಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ಮಧ್ಯಮ ಉರಿಯಲ್ಲಿ ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಬೇಕು. ಅದು ಗಟ್ಟಿಯಾಗುತ್ತಾ ಬರುವಾಗ ಈಗಾಗಲೇ ನೆನಸಿಟ್ಟಿದ್ದ ಕೇಸರಿ ಮಿಶ್ರಿತ ಹಾಲನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಏಲಕ್ಕಿ ಪುಡಿಯನ್ನು ಮತ್ತು 1 ಟೀ ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಕೈಯಾಡಿಸಬೇಕು. ಇದು ಆರಿದ ನಂತರ ಕೈಗೆ ತುಪ್ಪವನ್ನು ಸವರಿಕೊಂಡು ಗೋಡಂಬಿ, ಬಾದಾಮಿ, ಪಿಸ್ತಾವನ್ನು ಹಾಕಿ ಪೇಡಾವನ್ನು ತಯಾರಿಸಿದರೆ ರುಚಿಯಾದ ಕೇಸರಿ ದೂದ್ ಪೇಡಾ ಸವಿಯಲು ಸಿದ್ಧ. ಇದು ಮಕ್ಕಳಿಗಂತೂ ಬಹಳ ಇಷ್ಟವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ