* ಕರಿಯಲು ಎಣ್ಣೆ
* ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಮೊದಲು ಮಿಕ್ಸಿಯಲ್ಲಿ ಪುದೀನಾ ಮತ್ತು ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಬೌಲ್‌ಗೆ ಅಕ್ಕಿಹಿಟ್ಟು, ಜೀರಿಗೆ, ಉಪ್ಪು, ಹುರಿದ ಎಳ್ಳು, ಸ್ವಲ್ಪ ಬಿಸಿ ಮಾಡಿದ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ರುಬ್ಬಿಕೊಂಡ ಪುದೀನಾ ಸೊಪ್ಪನ್ನು ಹಾಕಿ ಕಲೆಸಬೇಕು. (ಗಟ್ಟಿಯದರೆ ಸ್ವಲ್ಪ ನೀರನ್ನು ಸೇರಿಸಬಹುದು) ಮೃದುವಾಗ ಕಲೆಸಿಕೊಳ್ಳಬೇಕು. ನಂತರ ಎಣ್ಣೆಯನ್ನು ಬಿಸಿ ಮಾಡಲು ಇಟ್ಟು ಚಕ್ಕುಲಿ ಒರಳಿನಲ್ಲಿ ಹಿಟ್ಟನ್ನು ಹಾಕಿ ಬಿಸಿಯಾದ ಎಣ್ಣೆಯಲ್ಲಿ ಬಿಡಬೇಕು. ಚಕ್ಕುಲಿ ರೀತಿಯಲ್ಲಿ ಬೇಕಂದರೆ ಒಂದು ಪ್ಲೇಟ್‌ನಲ್ಲಿ ಚಿಕ್ಕ ಚಿಕ್ಕ ಚಕ್ಕುಲಿಯನ್ನು ಹಿಟ್ಟಿನಿಂದ ಒತ್ತಿ ಎಣ್ಣೆಯಲ್ಲಿ ಕರಿಯಬೇಕು. ಎರಡೂ ಬದಿಯಲ್ಲಿ ಗರಿ ಗರಿಯಾಗಿ ಬೇಯಿಸಬೇಕು. ಈಗ ಸಿದ್ಧವಾದ ರುಚಿ ರುಚಿಯಾದ ಪುದೀನಾ ಸೊಪ್ಪಿನ ಮುರುಕು ಸವಿಯಲು ಸಿದ್ಧ.