ಮೈದಾ ಹಿಟ್ಟಿನ ಸಿಹಿ ಬೋಂಡಾ

ಶನಿವಾರ, 15 ನವೆಂಬರ್ 2014 (16:33 IST)
ಬೇಕಾಗುವ ಸಾಮಗ್ರಿ- ಮೈದಾ ಹಿಟ್ಟು 1 ಲೋಟ, ಸಕ್ಕರೆ ಮುಕ್ಕಾಲು ಕಪ್, ಹಾಲು ಒಂದು ಲೋಟ, ಚಿಟಿಕೆ ಸೋಡ, ಏಲಕ್ಕಿ ಪುಡಿ ಚಿಟಿಕೆ, ಗೋಡಂಬಿ ಚೂರು, ಕೊಬ್ಬರಿ ತುರಿ ಕಾಲು ಬಟ್ಟಲು, ಕರಿಯಲು ಎಣ್ಣೆ.
 
ಮಾಡುವ ವಿಧಾನ- ಮೈದಾ ಹಿಟ್ಟನ್ನು ಹಾಲಿನಲ್ಲಿ ಗಂಟಿಲ್ಲದಂತೆ ಕಲಸಿ. ಇದಕ್ಕೆ ಗೋಡಂಬಿ ಚೂರು ಮತ್ತು ಕೊಬ್ಬರಿ ತುರಿ ಹಾಕಿ ನಾಲ್ಕು ಗಂಟೆ ಕಾಲ ನೆನೆಸಿಡಿ. ನಂತರ ಇದಕ್ಕೆ ಚಿಟಿಕೆ ಸೋಡಾ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ. ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ. ಎಣ್ಣೆ ಚೆನ್ನಾಗಿ ಕಾದ ನಂತರ ಸೌಟಿನಿಂದ ಸ್ವಲ್ಪ ಸ್ವಲ್ಪ ಹಿಟ್ಟನ್ನು ಎಣ್ಣೆಗೆ ಹಾಕಿ ಕರಿಯಿರಿ. ಹೊಂಬಣ್ಣಕ್ಕೆ ತಿರುಗಿದ ಮೇಲೆ ಹೊರತೆಗಿಯಿರಿ. ಇದು ತಿನ್ನಲು ಬಲು ರುಚಿ.

ವೆಬ್ದುನಿಯಾವನ್ನು ಓದಿ