ಉದ್ದಿನ ಹಪ್ಪಳ ಮಾಡಿ ನೋಡಿ

ಶನಿವಾರ, 30 ಮೇ 2020 (15:17 IST)
ಲಾಕ್ ಡೌನ್ ನಲ್ಲಿ ಬಹಳಷ್ಟು ಮಹಿಳೆಯರು ಸಾಮಾಜಿಕ ಜಾಲತಾಣ ಬಳಸಿ ಬಗೆ ಬಗೆ ಅಡುಗೆಗಳನ್ನು ಟ್ರೈ ಮಾಡುತ್ತಿದ್ದಾರೆ. ಅಂಥವರಿಗಾಗಿ ಉದ್ದಿನ ಹಪ್ಪಳ ಮಾಡುವ ಟಿಪ್ಸ್ ಇಲ್ಲಿದೆ.


ಏನೇನ್ ಬೇಕು?
ಇಂಗು 1 ಚಮಚ
ಮೈದಾಹಿಟ್ಟು 1 ಕಪ್
ಉದ್ದಿನ ಬೇಳೆ ಅರ್ಧ ಕೆ.ಜಿ
ಉಪ್ಪು ರುಚಿಗಾಗಿ

ಉದ್ದಿನ ಹಪ್ಪಳ ಮಾಡೋದು ಹೇಗೆ?: ಉದ್ದಿನ ಬೇಳೆಯನ್ನು ಹಿಟ್ಟು ಮಾಡಬೇಕು. ಇದಕ್ಕೆ ಉಪ್ಪು, ಹಿಂಗು ಹಾಕಿ ಕಲಿಸಿಕೊಂಡು ಚಪಾತಿಗೆ ಹಿಟ್ಟು ಕಲಿಸುವಂತೆ ಮಾಡಿಕೊಂಡಿರಬೇಕು. ಆ ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಮೈದಾ ಹಿಟ್ಟನ್ನು ಸವರಿ ಚಪಾತಿಯಂತೆ ಲಟ್ಟಿಸಬೇಕು.  ಬಿಸಿಲಲ್ಲಿ ಒಣಗಿದ ಮೇಲೆ  ಬೇಕಾದ ಸಮಯದಲ್ಲಿ ಎಣ್ಣೆಯಲ್ಲಿ ಕರಿದು ಚಪ್ಪರಿಸಿ ತಿನ್ನಬಹುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ