ಬೆಂಗಳೂರು : ಬೇಸಿಗೆ ಕಾಲದಲ್ಲಿ ತಂಪಾದ ಪಾನೀಯಗಳನ್ನು ಕುಡಿಯಲು ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಆದಕಾರಣ ಮಕ್ಕಳು ಇಷ್ಟಪಡುವಂತಹ ಒರಿಯೋ ಮಿಲ್ಕ್ ಶೇಕ್ ಮನೆಯಲ್ಲೇ ತಯಾರಿಸಿ ಕೊಡಿ.
ಬೇಕಾಗುವ ಸಾಮಾಗ್ರಿಗಳು: 100 ಎಂಎಲ್ ಹಾಲು, 1 ಪ್ಯಾಕ್ ಒರಿಯೋ ಬಿಸ್ಕೆಟ್, 3 ಟೇಬಲ್ ಸ್ಪೂನ್ ಸಕ್ಕರೆ ಪುಡಿ, ವೆನಿಲಾ ಐಸ್ ಕ್ರೀಂ, ಚಾಕಲೇಟ್ ಸೀರಪ್ 4-5 ಚಮಚ
ಮಾಡುವ ವಿಧಾನ: ಮಿಕ್ಸಿ ಜಾರಿಗೆ ಬಿಸ್ಕೆಟ್, ಸಕ್ಕರೆ, ಹಾಲು, ಐಸ್ ಕ್ರೀಂ, ಐಸ್ ಕ್ಯೂಬ್ , ಚಾಕಲೇಟ್ ಸೀರಪ್ ಹಾಕಿ ರುಬ್ಬಿ. ಬಳಿಕ ಒಂದು ಗ್ಲಾಸ್ ಗೆ ಚಾಕಲೇಟ್ ಸೀರಪ್ ಹಾಕಿ ಬಳಿಕ ರುಬ್ಬಿದ ಒರಿಯೋ ಮಿಲ್ಕ್ ಶೇಕ್ ಹಾಕಿ.