ಸುಲಭವಾಗಿ ಹಾಲಿನಿಂದ ಐಸ್‌ಕ್ರೀಮ್ ಮಾಡಿ ಸವಿಯಿರಿ

ಸೋಮವಾರ, 25 ಮಾರ್ಚ್ 2019 (18:20 IST)
ಚಿಣ್ಣರಿಂದ ವೃದ್ಧರವರೆಗೂ ಇಷ್ಟಪಡುವ ತಿನಿಸು ಎಂದರೆ ಐಸ್‌ಕ್ರೀಮ್ ಎಂದು ಹೇಳಬಹುದು. ಓವನ್ ಇಲ್ಲದೇ ಕೇವಲ ಫ್ರಿಡ್ಜ್ ಇದ್ದರೂ ಸುಲಭವಾಗಿ ಮನೆಯಲ್ಲಿಯೇ ಹಾಲಿನಿಂದ ರುಚಿಕರವಾದ ಕುಲ್ಫಿಯನ್ನು ಮಾಡಿ ಸವಿಯಬಹುದು. 
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಹಾಲು 1/2 ಲೀಟರ್
* ಸಕ್ಕರೆ 4 ಟೀ ಚಮಚ
* ಡ್ರೈ ಫ್ರುಟ್ಸ್ ಪೌಡರ್ 4 ಚಮಚ
* ಹಸಿರು ಏಲಕ್ಕಿ ಪುಡಿ 2 ಚಮಚ
    
 ತಯಾರಿಸುವ ವಿಧಾನ:
   ಮೊದಲು ಹಾಲನ್ನು ಬಿಸಿ ಮಾಡಲು ಪ್ರಾರಂಭಿಸಲಬೇಕು. ಹಾಲಿನ ಕುದಿ ಬಂದ ನಂತರ ಅದಕ್ಕೆ 4 ಟೀ ಚಮಚ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂಚರ ಅದಕ್ಕೆ ಡ್ರೈ ಫ್ರುಟ್ಸ್ ಪೌಡರ್ ಮತ್ತು ಹಸಿರು ಏಲಕ್ಕಿಯನ್ನು ಹಾಕಿ ಮತ್ತೆ ಕುದಿಸಬೇಕು. ಸ್ವಲ್ಪ ಹೊತ್ತು ಹಾಗೆ ಕುದಿಸಿದ ನಂತರ ಒಲೆಯಿಂದ ಇಳಿಸಬೇಕು. ನಂತರ ಅದನ್ನು ಲೋಟಕ್ಕೆ ಹಾಕಿಕೊಳ್ಳಬೇಕು. ನಂತರ ಲೋಟದ ಕಂಠಕ್ಕೆ ಮಾತ್ರ ಪ್ಲಾಸ್ಟಿಕ್‌ ಕವರ್‌ನಿಂದ ಮುಚ್ಚಿ ಲೋಟದ ಮಧ್ಯದಲ್ಲಿ ಒಂದು ಕಡ್ಡಿಯನ್ನು ಚುಚ್ಚಬೇಕು.  ನಂತರ ಇದನ್ನು ಫ್ರಿಡ್ಜ್‌ನ್ಲಲಿ 8 ಗಂಟೆಗಳ ಕಾಲ ಇಟ್ಟು ನಂತರ ಪ್ರಿಡ್ಜ್ ಇಂದ ತೆಗೆದರೆ ರುಚಿಕರವಾದ ಕುಲ್ಫಿ ಸವಿಯಲು ಸಿದ್ಧ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ