ಮಗುವಿಗೆ ಎದೆಹಾಲುಣಿಸುತ್ತಿದ್ದ ತಾಯಿಯ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕರಿಗೆ ತಕ್ಕ ಪಾಠ ಕಲಿಸಿದ ಸಾರ್ವಜನಿಕರು

ಶನಿವಾರ, 9 ಫೆಬ್ರವರಿ 2019 (09:33 IST)
ಬೆಂಗಳೂರು : ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆಯೊಬ್ಬಳ ಜೊತೆ ಯುವಕರಿಬ್ಬರು ಅಸಭ್ಯವಾಗಿ ವರ್ತಿಸಿದ ಘಟನೆ ನೆಲಮಂಗಲ ಪಟ್ಟಣದ ರಾಜೀವ್ ಗಾಂಧಿ ನಗರದ ಬಳಿ ನಡೆದಿದೆ.

ಮಹಿಳೆಯೊಬ್ಬಳು ತನ್ನ ಮಗುವಿಗೆ ಎದೆಹಾಲುಣಿಸುತ್ತಿದ್ದಾಗ ಆಕೆಯನ್ನು ನೋಡಿ  ಯುವಕರಿಬ್ಬರು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಕಂಡು ಅಲ್ಲಿದ್ದ ಸಾರ್ವಜನಿಕರು ಇಬ್ಬರು ಯುವಕರನ್ನು ಹಿಡಿದು ಅವರ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

 

  ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಪಟ್ಟಣದ ಪೊಲೀಸರು ಸಾರ್ವಜನಿಕರಿಂದ ಅವರನ್ನು ಬಿಡಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ