ಬೇಸಿಗೆ ಬಂತೆಂದರೆ ಸಾಕು ದೊಡ್ಡವರು ಮಕ್ಕಳೆನ್ನದೆ ಎಲ್ಲರೂ ಐಸ್‌ಕ್ರೀಂ ಪಾರ್ಲರ್‌ಗಳಿಗೆ ಲಗ್ಗೆಯಿಡುತ್ತಾರೆ. ಐಸ್‌ಕ್ರೀಂ ಇಷ್ಟವಿಲ್ಲದೇ ಇರುವವರು ಹುಡುಕಿದರೂ ಸಿಗುವುದು ಕಷ್ಟ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಐಸ್‌ಕ್ರೀಂಗಳು ಲಭ್ಯವಿದೆ ಆದರೆ ಅವುಗಳಲ್ಲಿ ಕುಲ್ಫಿಗೆ ತನ್ನದೇ ಆದ ಪ್ರತ್ಯೇಕತೆಯಿದೆ. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇದು ಇಷ್ಟವಾಗುತ್ತದೆ. ಇದನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದಾಗಿದೆ.
ಸಕ್ಕರೆ - 1/2 ಕಪ್
ಕಾಯಿ ತುರಿ - 2 ಚಮಚ
ಏಲಕ್ಕಿ ಪುಡಿ - 1/2 ಚಮಚ
ಮಾಡುವ ವಿಧಾನ:
ಬಾದಾಮಿ ಮತ್ತು ಪಿಸ್ತಾವನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ. ಒಂದು ಬೌಲ್‌ಗೆ 3 ಚಮಚ ಕಸ್ಟರ್ಡ್ ಪೌಡರ್ ಮತ್ತು ಅರ್ಧ ಕಪ್ ಹಾಲನ್ನು ಹಾಗಿ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಿ. ನಂತರ ಒಂದು ದಪ್ಪ ತಳದ ಪಾತ್ರೆಯನ್ನು ಸ್ಟೌ ಮೇಲಿಟ್ಟು ಅರ್ಧ ಲೀಟರ್ ಕೆನೆ ಹಾಲನ್ನು ಹಾಕಿ ಚೆನ್ನಾಗಿ ಕುದಿಸಬೇಕು. 2 ರಿಂದ ಮೂರು ಬಾರಿ ಹಾಲು ಉಕ್ಕಿದ ನಂತರ ಅದಕ್ಕೆ ಸಕ್ಕರೆ, ಬಾದಾಮಿ, ಪಿಸ್ತಾ ಚೂರುಗಳು, ಏಲಕ್ಕಿ ಪುಡಿ ಮತ್ತು 2 ಚಮಚ ಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅದಕ್ಕೆ ಈ ಗಾಗಲೇ ತಯಾರಿಸಿದ ಕಸ್ಟರ್ಡ್ ಅನ್ನು ಹಾಕಿ ತಳ ಹಿಡಿಯದಂತೆ ನೋಡಿಕೊಳ್ಳಬೇಕು.
ಹೀಗೆ ಇದನ್ನು ಮಧ್ಯಮ ಉರಿಯಲ್ಲಿ ಕುದಿಸುತ್ತಾ ಬಂದರೆ ಈ ಮಿಶ್ರಣ ಸ್ವಲ್ಪ ಸ್ವಲ್ಪವೇ ದಪ್ಪವಾಗುತ್ತಾ ಬರುತ್ತದೆ. ನಂತರ ಸ್ಟೌ ಆಫ್ ಮಾಡಿ ಅದನ್ನು 30 ನಿಮಿಷಗಳವರೆಗೆ ಹಾಗೆಯೇ ಬಿಟ್ಟು ನಂತರ ನಿಮ್ಮ ಅಗತ್ಯಕ್ಕೆ ತಕ್ಕಂತೆ ಪಾಟ್‌ಗಳಲ್ಲಿ, ಲೋಟಗಳಲ್ಲಿ ಅಥವಾ ಕುಲ್ಫಿ ಸ್ಟ್ಯಾಂಡ್‌ನಲ್ಲಿ ಮಿಶ್ರಣವನ್ನು ಹಾಕಿ ಮುಚ್ಚಿ 8-10 ಗಂಟೆಗಳಕಾಲ ಫ್ರಿಡ್ಜ್‌ನಲ್ಲಿಟ್ಟರೆ ರುಚಿಯಾದ ಕುಲ್ಫಿ ಸವಿಯಲು ಸಿದ್ಧವಾಗುತ್ತದೆ.