ಪುದೀನಾ, ದಾಳಿಂಬೆ ಹಣ್ಣಿನ ರಾಯಿತ

ಬುಧವಾರ, 28 ಫೆಬ್ರವರಿ 2018 (06:56 IST)
ಬೆಂಗಳೂರು: ದೇಹಕ್ಕೂ ತಂಪು ಅನಿಸುವ ಹಾಗೂ ಆರೋಗ್ಯಕ್ಕೂ ಹಿತಕರ ಅನಿಸುವ ರಾಯಿತಗಳು ರುಚಿಕರವಾಗಿರುತ್ತದೆ. ಮೊಸರು ಹಾಗೂ ದಾಳಿಂಬೆ ಬೀಜ, ಪುದೀನಾ ಉಪಯೋಗಿಸಿ ಮಾಡುವ  ರಾಯಿತವನ್ನು ಹೇಗೆ ಮಾಡಬಹುದು ಎಂಬುದರ ಕುರಿತು ವಿವರಣೆ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು
2 ಕಪ್ ದಪ್ಪ ಮೊಸರು
1 ಕಪ್ ದಾಳಿಂಬೆ ಹಣ್ಣಿನ ಬೀಜ
¼  ಪುದೀನಾ ಎಲೆ
¼ ಕೊತ್ತಂಬರಿ ಸೊಪ್ಪು
3-4 ಬೆಳ್ಳುಳ್ಳಿ
2- ಹಸಿಮೆಣಸು
ಉಪ್ಪು ರುಚಿಗೆ ತಕ್ಕಷ್ಟು
1 ಚಮಚ ಸಕ್ಕರೆ
1 ಟೀ ಚಮಚ ಚಾಟ್ ಮಸಾಲಾ
1 ಟೀ ಚಮಚ ಜೀರಿಗೆ ಪುಡಿ

ವಿಧಾನ: ಪುದೀನಾ ಎಲೆ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಲಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಿ.
ಇನ್ನೊಂದು ಪಾತ್ರೆಗೆ ಮೊಸರು ಹಾಕಿ ಅದಕ್ಕೆ ¼ ಕಪ್ ನೀರು ಸೇರಿಸಿ ಗಂಟಿಲ್ಲದಂತೆ ಕರಗಿಸಿಕೊಳ್ಳಿ.
ನಂತರ ಇದಕ್ಕೆ ಜೀರಿಗೆ ಪುಡಿ, ಚಾಟ್ ಮಸಾಲಾ ಸಕ್ಕರೆ ಸೇರಿಸಿ. ತದನಂತರ ಪುದೀನಾ ಚಟ್ನಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಸರ್ವ್ ಮಾಡುವಾಗ ಇದಕ್ಕೆ ಬಾದಾಮಿ ಹಣ್ಣಿನ ಬೀಜಗಳನ್ನು ಸೇರಿಸಿ. ಬಡಿಸಿದರೆ ರುಚಿಯಾದ ರಾಯಿತ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ