ಸ್ವಾದಿಷ್ಠವಾದ ಈರುಳ್ಳಿ ಕೋಳಿ ಗ್ರೇವಿ

ಮಂಗಳವಾರ, 25 ಸೆಪ್ಟಂಬರ್ 2018 (16:57 IST)
ದಿನನಿತ್ಯ ಕೋಳಿ ತಿನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ ಎಂದೇ ಹೇಳಬಹುದು. ಆದರೆ ಒಂದೇ ರೀತಿಯ ಕೋಳಿ ಆಹಾರ ತಿಂದು ನಿಮಗೆ ಬೇಸರವಾಗಿರಬಹುದು ಅದಕ್ಕೆಂದೇ ನಿಮ್ಮ ನಾಲಿಗೆಗೆ ಸಕತ್ ಆಗಿ ರುಚಿಸುವಂತ ಹೊಸ ಅಡುಗೆಯನ್ನು ನಾವು ಹೇಳ್ತಿವಿ ನೀವು ಒಮ್ಮೆ ಟ್ರೈ ಮಾಡಿ ಇದನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದು.
ಬೇಕಾಗುವ ಸಾಮಗ್ರಿಗಳು -
 
ಕೋಳಿಮಾಂಸ: 1/2 ಕೇಜಿ (ಚರ್ಮ ನಿವಾರಿಸಿದ್ದು) 
ಈರುಳ್ಳಿ - ಎರಡು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
ಟೊಮಾಟೊ: ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
ಶುಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಿಕ್ಕ ಚಮಚ 
ಹಸಿಮೆಣಸು : 4 ರಿಂದ 5 (ಪೇಸ್ಟ್ ಮಾಡಿಕೊಳ್ಳಿ)
ಮೊಸರು: ಒಂದು ಕಪ್ 
ಕಾಶ್ಮೀರಿ ಚಿಲ್ಲಿ ಪೌಡರ್: 1 ಚಮಚ
ಗರಂ ಮಸಾಲಾ: 1 ಚಮಚ
ಅರಿಶಿನ: 1 ಚಿಟಿಕೆ
ಎಣ್ಣೆ 
ಉಪ್ಪು: ರುಚಿಗೆ ತಕ್ಕಷ್ಟು
ಕೊತ್ತೊಂಬರಿ ಸೊಪ್ಪು (ಚಿಕ್ಕದಾಗಿ ಹೆಚ್ಚಿದ್ದು
 
ಮಾಡುವ ವಿಧಾನ: 
 
ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ ಕೊಂಚ ಎಣ್ಣೆಯನ್ನು ಹಾಕಿ ನಂತರ ಅದಕ್ಕೆ ಈರುಳ್ಳಿಯನ್ನು ಹಾಕಿ ಅದು ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಹುರಿಯಿರಿ. ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಟೊಮೆಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್ ಉಪ್ಪು ಹಾಕಿ ಸುಮಾರು ಹತ್ತು ನಿಮಿಷ ಬೇಯಲು ಬಿಡಿ ನಂತರ ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕ್ಕೆ ಕತ್ತರಿಸಿದ ಕೋಳಿಯ ತುಂಡುಗಳನ್ನು ಹಾಕಿ ಹುರಿಯಿರಿ ಸುಮಾರು ಮುಕ್ಕಾಲು ಭಾಗ ಬೆಂದಿದೆ ಎಂದು ಖಾತ್ರಿಪಡಿಸಿಕೊಳ್ಳಿ. 

ಹುರಿದ ಕೋಳಿಯನ್ನು ಮೊದಲೇ ತಯಾರಿಸಿಕೊಂಡಿದ್ದ ಈರುಳ್ಳಿ ಮಸಾಲೆ ತಯಾರಿಸಿರುವ ಪಾತ್ರೆಗೆ ಹಾಕಿಕೊಳ್ಳಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೊಂಚ ತಿರುವಿ ಅದಕ್ಕೆ ಕಾಶ್ಮೀರಿ ಚಿಲ್ಲಿ ಪೌಡರ್, ಗರಂ ಮಸಾಲಾ, ಅರಿಶಿನ ಹಾಕಿ ಉರಿ ಹೆಚ್ಚಿಸಿ ಬೇಯಲು ಬಿಡಿ. ಸುಮಾರು ಐದು ನಿಮಿಷದ ಬಳಿಕ ಮಾಂಸ ಬೆಂದಿದೆ ಅನ್ನಿಸಿದಾಗ ಉರಿ ತಗ್ಗಿಸಿ ಮೊಸರನ್ನು ಸೇರಿಸಿ ಕುದಿಯಲು ಬಿಡಿ. ನಂತರ ಅದರ ಮೇಲೆ ಕೊತ್ತೊಂಬರಿ ಸೊಪ್ಪನ್ನು ಬೀರಿ ಒಂದು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಕರವಾದ ಈರುಳ್ಳಿ ಕೋಳಿ ಗ್ರೇವಿ ಸಿದ್ಧ. ಇದು ಅಕ್ಕಿ ರೊಟ್ಟಿ, ಅನ್ನ, ಚಪಾತಿ ಹಾಗೂ ನೀರುದೋಸೆಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ