ಸ್ವಾದಿಷ್ಠ ಆಹಾರ ಪನೀರ್ ಬುರ್ಜಿ

ಅತಿಥಾ

ಸೋಮವಾರ, 29 ಜನವರಿ 2018 (20:48 IST)
ಬೇಕಾಗುವ ಸಾಮಗ್ರಿಗಳು
ಎಣ್ಣೆ - 2 ಚಮಚ
ಜೀರಿಗೆ - 1 ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ -  1 
ಉಪ್ಪು
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ - 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ 
ಅಚ್ಚಖಾರದ ಪುಡಿ - 1/2 ಚಮಚ
ಸಣ್ಣಗೆ ಹೆಚ್ಚಿದ ಟೊಮೆಟೋ - 1 
1/4 ಚಮಚ ಅರಿಶಿನ
1/2 ಚಮಚ ಗರಂ ಮಸಾಲಾ
ನಷ್ಟು ಸಣ್ಣಗೆ ಪುಡಿಪುಡಿ ಮಾಡಿಟ್ಟುಕೊಂಡ ಪನೀರ್ - 2 ಕಪ್
ಕಸೂರಿ ಮೇಥಿ - 1 ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ
ತಯಾರಿಸುವ ವಿಧಾನ
- ದೊಡ್ಡ ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿಕೊಳ್ಳಿ. ಅದಕ್ಕೆ ಜೀರಿಗೆ ಹಾಕಿ. ಅದು ಚಟಪಟ ಅಂದಮೇಲೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು 
 
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೋ ಹಾಕಿ ಅದು ಮೆತ್ತಗಾಗುವವರೆಗೆ ಕೈಯ್ಯಾಡಿಸಿ. 
 
ನಂತರ ಅಚ್ಚಖಾರದ ಪುಡಿ, ಅರಿಶಿನ, ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
 
- ಸಣ್ಣ ಉರಿಯಲ್ಲಿ 1 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ. ನಂತರ ಪುಡಿ ಮಾಡಿಟ್ಟುಕೊಂಡ ಪನೀರ್ ಹಾಕಿ. ಪನೀರ್ ಪೂರ್ತಿ ಮೆತ್ತಗಾಗದಂತೆ 
 
ನಿಧಾನವಾಗಿ ಕೈಯ್ಯಾಡಿಸಿ. ಸಣ್ಣ ಉರಿಯಲ್ಲಿ ಸುಮಾರು ಮೂರು ನಿಮಿಷ ಬಿಡಿ. ಪನೀರ್ ಅನ್ನು ಅತಿಯಾಗಿ ಹುರಿಯಬೇಡಿ, ಹಾಗೆ ಮಾಡಿದರೆ ಪನೀರ್ 
 
ಗಟ್ಟಿಯಾಗಿಬಿಡುತ್ತದೆ. ನಂತರ ಕಸೂರಿ ಮೇಥಿ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಬೆರೆಸಿದರೆ ಪನೀರ್ ಬುರ್ಜಿ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ